ಹತಾಶ ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಅಡ್ಡಿ ಆರೋಪ

ಸೋಲಿನ ಭೀತಿಯಲ್ಲಿರುವ ಕನಕಗಿರಿ, ಗಂಗಾವತಿ ಬಿಜೆಪಿ ನಾಯಕರು ಹತಾಶೆಗೊಂಡು ಗಲಾಟೆ‌ ಮಾಡಿಸುತ್ತಿರುವ ಆರೋಪ ಕೊಪ್ಪಳ : ಇಕ್ಬಾಲ್ ಅನ್ಸಾರಿ, ಶಾಸಕ ಶಿವರಾಜ್ ತಂಗಡಗಿ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸುತ್ತಿರುವ ಘಟನೆಗಳು ನಡೆದಿವೆ. ಎರಡು ಟ್ಯ್ರಾಕ್ಸ್ ಗಳಲ್ಲಿ ಬಂದ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಅಡ್ಡಿ ವ್ಯಕ್ತಪಡಿಸಿದ್ದಾರೆ ಪ್ರಚಾರವನ್ನು ಹಾಳು ಮಾಡಲು ಬಿಜೆಪಿ ಕಾರ್ಯಕರ್ತರ ನಿಯೋಜನೆ ಮಾಡಲಾಗಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಿದ್ದಾರೆ ಕೊಪ್ಪಳದ ವಡ್ಡರಹಟ್ಟಿಯಲ್ಲಿ ಇಕ್ಬಾಲ್ ಅನ್ಸಾರಿ ಬೆಂಬಲಿಗರ ವಾಹನಕ್ಕೆ ಕಲ್ಲು ತೂರಾಟ‌ ನಡೆಸಿದರೆ ಶಿವರಾಜ್ ತಂಗಡಗಿ ಪ್ರಚಾರದ ವೇಳೆ ಬಿಜೆಪಿ ಬಾವುಟ ಹಿಡಿದು ಘೋಷಣೆ ಕೂಗಿದ್ದಾರೆ.ಕನಕಗಿರಿ ಕ್ಷೇತ್ರದ ಹೇರೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕಾರ್ಯಕ್ರಮ ಹಾಳು ಮಾಡಲು ಯತ್ನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಹೇರೂರು ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆಮೋದಿ ಮೋದಿ ಎಂದು ಕೂಗಿ ತಂಗಡಗಿಗೆ ಮುಜುಗರ ತಂದ ಯುವಕರು ಕಾಂಗ್ರೆಸ್ ಅಭ್ಯರ್ಥಿಗಳು ಹೋದ ಕಡೆಗೆ…

Read More