ಅಭಿವೃದ್ಧಿ ಹೆಸರಲ್ಲಿ ಕಾಂಗ್ರೆಸ್ ಅಧಿಕಾರ ದುರುಪಯೋಗ: ಅಮರೇಶ ವಾಗ್ದಾಳಿ

ಕೊಪ್ಪಳ:  ಅಭಿವೃದ್ಧಿ ಹೆಸರಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡ ಕೀರ್ತಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಐದು ವರ್ಷ ಬರೀ ಅಕ್ರಮ ಎಸಗುವುದರಲ್ಲೇ ಕಾಂಗ್ರೆಸ್‌ನವರು ಕಾಲಹರಣ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಅಮರೇಶ್ ಕರಡಿ ವಾಗ್ದಾಳಿ ನಡೆಸಿದರು. ಅವರು ತಾಲೂಕಿನ ಬಂಡಿಹರ್ಲಾಪುರ, ಹಳೇಬಂಡಿಹರ್ಲಾಪುರ, ಹೊಸಬಂಡಿಹರ್ಲಾಪುರ, ಬಸಾಪುರ, ಕವಳಿ, ಮಹಮ್ಮದ್‌ನಗರ ಗ್ರಾಮಗಳಲ್ಲಿ ಶನಿವಾರ ಮತಪ್ರಚಾರ ನಡೆಸಿ ಮಾತನಾಡಿ, ತಮ್ಮ ಅಧಿಕಾರ ಕೊನೆಗೊಳ್ಳುವ ನಾಲ್ಕೈದು ತಿಂಗಳಲ್ಲಿ ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡಿದ್ದೇ ಕಾಂಗ್ರೆಸ್‌ನವರ ಬಹುದೊಡ್ಡ ಸಾಧನೆ. ಕೊನೆಗಳಿಗೆಯಲ್ಲಿ ರಾಜ್ಯದೆಲ್ಲೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಚಾಲನೆ ನೀಡಿದ ಕಾಮಗಾರಿಗಳಿಗೆ ಅನುದಾನನವಿಲ್ಲದೆ ಅವುಗಳು ಹಾಗೆಯೆ ನಿಂತಿವೆ. ಕೊಪ್ಪಳ ಕ್ಷೇತ್ರದಲ್ಲೂ ಸಹ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡುವಲ್ಲಿ ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಭಿವೃದ್ಧಿ ನೆಪದಲ್ಲಿ ಕಾಲಹರಣ ಮಾಡಿದೆ. ಪ್ರಧಾನಿ ಮೋದಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ…

Read More