ಮೋದಿ ಕನಸು ಸಾಕಾರಗೊಳಿಸಲು ಬಿಜೆಪಿ ಬೆಂಬಲಿಸಿ-ಸಂಸದ ಸಂಗಣ್ಣ ಮನವಿ

ಸಮಗ್ರ ನೀರಾವರಿಗೆ ಬಿಜೆಪಿಗೆ ಮತ | ಅನ್ನಭಾಗ್ಯದಲ್ಲಿ ಕಾಂಗ್ರೆಸ್ ಪುಕ್ಕಟೆ ಪ್ರಚಾರ: ಅಮರೇಶ ಕರಡಿ  ಕೊಪ್ಪಳ, ಮೇ.೦೩: ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರಗಳು ಆಡಳಿತ ನಡೆಸಿದರೆ ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿಕೊಡಲು ಸಾಧ್ಯವಿದೆ. ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರ ಕೊಡುವ ಅನುದಾನದ ಮಾಹಿತಿಯನ್ನು ಮುಚಿಟ್ಟು ಸಿದ್ಧರಾಮಯ್ಯನವರು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಅಮರೇಶ ಕರಡಿ ಹೇಳಿದರು. ತಾಲೂಕಿನ ಹಟ್ಟಿ, ಚಿಲವಾಡಗಿ, ಕಲಕೇರಿ, ದೇವಲಾಪೂರ ಹಾಗೂ ವಿವಿಧ ಗ್ರಾಮಗಳಲ್ಲಿ ಮತಯಾಚನೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ಆತ್ಮಹತ್ಯೆ ಭಾಗ್ಯವನ್ನು ಕರುಣಿಸಿದೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ರಾಜ್ಯ ಸರ್ಕಾರ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಪರಿಹಾರ ವಿತರಣೆ ಮಾಡಿಲ್ಲ. ಬೆಳೆದ ಬೆಳೆಗೆ, ಸಂಕಷ್ಟಕ್ಕೊಳಗಾದ ರೈತರಿಗೆ ಬೆಂಬಲ ಬೆಲೆ ನೀಡುವುದಕ್ಕೆ ಸಂಪೂರ್ಣವಾಗಿ ವಿಫಲವಾಗಿದೆ. ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಜನಸಾಮಾನ್ಯರಿಗೆ ಅನುಕೂಲವಾಗುವ ದಿಸೆಯಲ್ಲಿ…

Read More