ಉಮೇದುವಾರಿಕೆ ಹಿಂಪಡೆದ 06 ಅಭ್ಯರ್ಥಿಗಳು : ಅಂತಿಮ ಕಣದಲ್ಲಿ 52 ಅಭ್ಯರ್ಥಿಗಳು

ಕೊಪ್ಪಳ : ಕೊಪ್ಪಳ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ್ದವರ ಪೈಕಿ 06 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು, ಇದೀಗ 52 ಅಭ್ಯರ್ಥಿಗಳು ಚುನಾವಣಾ ಅಂತಿಮ ಕಣದಲ್ಲಿ ಉಳಿದಂತಾಗಿದೆ. ವಿಧಾನಸಭಾ ಚುನಾವಣೆಗಾಗಿ ಐದೂ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದ 65 ಅಭ್ಯರ್ಥಿಗಳ ಪೈಕಿ 7 ಅಭ್ಯರ್ಥಿಗಳ ನಾಮಪತ್ರ ತಿರಸ್ಕøತಗೊಂಡು, 58 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿದ್ದವು. ಉಮೇದುವಾರಿಕೆ ಹಿಂಪಡೆಯಲು ಏ. 27 ಶುಕ್ರವಾರ ಕೊನೆಯ ದಿನವಾಗಿತ್ತು. ಕುಷ್ಟಗಿ ಕ್ಷೇತ್ರದಲ್ಲಿ 09, ಕನಕಗಿರಿ- 10, ಗಂಗಾವತಿ-12, ಯಲಬುರ್ಗಾ-11 ಹಾಗೂ ಕೊಪ್ಪಳ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಚುನಾವಣಾ ಅಂತಿಮ ಕಣದಲ್ಲಿ ಉಳಿದಿದ್ದಾರೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿದ್ದವು. ಶುಕ್ರವಾರದಂದು ಡಾ. ಪ್ರಭಾಕರಗೌಡ ಅಮ್ಮಣ್ಣವರ- ರಾಣಿ ಚನ್ನಮ್ಮ ಪಕ್ಷ ಅಭ್ಯರ್ಥಿ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು, ಇದರಿಂದಾಗಿ ಕಣದಲ್ಲಿ 09 ಅಭ್ಯರ್ಥಿಗಳು ಉಳಿದಂತಾಗಿದೆ. ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳ…

Read More