ವಿಧಾನಸಭಾ ಕ್ಷೇತ್ರವಾರು ರ‍್ಯಾಂಡಮೈಜೇಶನ್ ಮೂಲಕ ಮತ ಯಂತ್ರಗಳ ಹಂಚಿಕೆ

ಪ್ರಸಕ್ತ ವಿಧಾನಸಭಾ ಚುನಾವಣೆ ನಿಮಿತ್ಯ ಮೇ. ೧೨ ರಂದು ನಡೆಯುವ ಮತದಾನಕ್ಕಾಗಿ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದು, ಆಯಾ ವಿಧಾನಸಭಾ ಕ್ಷೇತ್ರವಾರು ಮತ ಯಂತ್ರಗಳನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಕಂಪ್ಯೂಟರೀಕೃತ ರ‍್ಯಾಂಡಮೈಜೇಶನ್ ಮೂಲಕ ಮಂಗಳವಾರದಂದು ಹಂಚಿಕೆ ಮಾಡಿದರು. ಜಿಲ್ಲಾಡಳಿತ ಭವನದ ಎನ್‌ಐಸಿ ಕಚೇರಿ ಸಭಾಂಗಣದಲ್ಲಿ ಕಂಪ್ಯೂಟರೀಕೃತವಾಗಿ ರ‍್ಯಾಂಡಮೈಜೇಶನ್ (ಯಾದೃಚ್ಛೀಕರಣ) ಕೈಗೊಳ್ಳುವ ಮೂಲಕ ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಮತಗಟ್ಟೆಗಳ ಸಂಖ್ಯೆಗನುಗುಣವಾಗಿ ಹಂಚಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಕೊಪ್ಪಳ ಜಿಲ್ಲೆಯಲ್ಲಿ ಕಳೆದ ತಿಂಗಳು ಎಲ್ಲ ಮತಯಂತ್ರಗಳು ಹಾಗೂ ವಿವಿ ಪ್ಯಾಟ್‌ಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪರಿಶೀಲಿಸಿ, ಜಿಲ್ಲಾಡಳಿತ ಭವನ ಆವರಣದಲ್ಲಿನ ದಾಸ್ತಾನು ಕೇಂದ್ರದಲ್ಲಿ ಇರಿಸಲಾಗಿತ್ತು. ಜಿಲ್ಲೆಗೆ ಒಟ್ಟು ೧೬೩೫ ಕಂಟ್ರೋಲ್ ಯುನಿಟ್, ೧೯೬೩ ಬ್ಯಾಲೆಟ್ ಯುನಿಟ್ ಹಾಗೂ ೧೭೬೬ ವಿವಿ…

Read More