ಮಣಿದ ಬಿಜೆಪಿ ಹೈಕಮಾಂಡ್ : ಬೆಂಗಳೂರಿಗೆ ಸಂಗಣ್ಣ ಕರಡಿ , ಸಂದಾನ ಯಶಸ್ವಿಯಾಗುತ್ತಾ?

ಕೊಪ್ಪಳದಲ್ಲಿ ಬಿಜೆಪಿ ಬಂಡಾಯ ಅಂತಿಮ ಘಟ್ಟ ತಲುಪಿದೆ. ಬಿಜೆಪಿಯ 2ನೇ ಅಭ್ಯರ್ಥಿ ಪಟ್ಟಿ ಇದೀಗ ಹೈಕಮಾಂಡ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದು ಕಣ್ಣೀಗೆ ಬೆಣ್ಣೆ, ಮತ್ತೊಂದು ಕಣ್ಣೀಗೆ ಸುಣ್ಣ ಹಚ್ತಿರೋ ಹೈಕಮಾಂಡ್ ವಿರುದ್ಧ ಇಂದು ಸಾವಿರಾರು ಕಾರ್ಯಕರ್ತರು ಸಂಸದರ ಮನೆ ಮುಂದೆ ಜಮಾಸಿಯಿದ್ರು. ಅಲ್ದೆ, ಸಂಸದರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ಗೆ ಆಗ್ರಹಿಸಿದ್ರು. ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಬೆನ್ನಲ್ಲೇ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಚುನಾವಣೆಗೆ ಅಭ್ಯರ್ಥಿಗಳ 2ನೇ ಪಟ್ಟಿಯನ್ನ ರೀಲಿಸ್ ಮಾಡಿದ ಬಿಜೆಪಿ ಹೈಕಮಾಂಡ್ ಇದೀಗ ಟಿಕೆಟ್ ವಂಚಿತರ ಕೆಂಗಣ್ಣಿಗೆ ಗುರಿಯಾಗಿದೆ. ಟಿಕೆಟ್ ವಂಚಿತರು ಇದೀಗ ಹೈಕಮಾಂಡ್ ವಿರುದ್ಧ ಬಂಡಾಯ ಎದ್ದಿದ್ದಾರೆ. ಇದಕ್ಕೆ ಕೊಪ್ಪಳ ವಿಧಾನ ಸಭಾ ಕ್ಷೇತ್ರವೇ ಸಾಕ್ಷಿ ಈ ಹಿಂದೆ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಯಡಿಯೂರಪ್ಪ ಹಾಗೂ ಶ್ರೀರಾಮುಲು ಹೊರತುಪಡಿಸಿ ಸಂಸದರಿಗೆ ಟಿಕೆಟ್ ನೀಡೋದಿಲ್ಲ ಎಂದು ಸ್ಪಷ್ಟಪಡಿಸಿದ್ರು. ಇದಕ್ಕೆ…

Read More