ಅಂಬೇಡ್ಕರ್‌ರವರ ಕಾರ್ಯಗಳನ್ನು ಮರೆಮಾಚಿ ಅಗೌರವ ತೋರಿಸಿರುವುದು ಖಂಡನೀಯ-ಸಂಗಣ್ಣ ಕರಡಿ

ಕೊಪ್ಪಳ, ಏ.೧೪: ದೀನ ದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ ಪರವಾದ ಪಕ್ಷ ಎಂದು ದಶಕಗಳ ಕಾಲ ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್‌ರವರನ್ನು ೨ ಬಾರಿ ಸೋಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಕೊಪ್ಪಳ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಹೇಳಿದರು. ಶೋಷಿತರು ರಾಜಕೀಯಕ್ಕೆ ಬರಬೇಕು ಎಂದು ೧೯೫೨ರಲ್ಲಿ ಮೊದಲಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ನೆಹರುರವರು ಅವರ ಸೋಲಿಗೆ ಕಾರಣಿಕರ್ತರಾಗಿದ್ದರು. ೧೯೫೪ರಲ್ಲಿ ಉಪ ಚುನಾವಣೆಯಲ್ಲಿಯೂ ಕೂಡಾ ಕಾಂಗ್ರೆಸ್ ಅವರನ್ನು ಸೋಲಿಸುತ್ತದೆ. ಅಂದು ಸಂಸತ್ತಿನಲ್ಲಿ ಹಿಂದು ಬಿಲ್ ಪಾಸು ಮಾಡಲು ಕಾಂಗ್ರೆಸ್ ಚಕಾರ ಎತ್ತಿದ್ದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದ ಹಠವಾದಿ ಅಂಬೇಡ್ಕರ್ ಎಂದರು. ಡಾ|| ಬಿ.ಆರ್. ಅಂಬೇಡ್ಕರ್‌ರವರ ೧೨೭ನೇ ಜಯಂತೋತ್ಸವದ ಅಂಗವಾಗಿ ಭಾಜಪ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ರವರ ಚರಿತ್ರೆಯನ್ನು ನೋಡಿದಾಗ ಅವರ ವಿದ್ಯಾರ್ಥಿ ಜೀವನದಲ್ಲಿ ಬೇರೆ ಸ್ಥಳದಲ್ಲಿ…

Read More