ಗೋವು ಏಕೆ, ನಾಯಿಗೂ ಪ್ರಾಮುಖ್ಯತೆ ನೀಡಿ: ನಿಜಗುಣಾನಂದ ಸ್ವಾಮೀಜಿ

ಬೆಂಗಳೂರು, ಎ.14: ಗೋವು ಒಂದಕ್ಕೆ ಪ್ರಾಮುಖ್ಯತೆ ನೀಡುವುದು ಸರಿಯಲ್ಲ. ನಾಯಿ ಸೇರಿದಂತೆ ಎಲ್ಲ ಪ್ರಾಣಿವರ್ಗಕ್ಕೂ ನಾವು ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಬೈಲೂರು ನಿಷ್ಕಲ ಮಂಟಪದ ಪೀಠಾಧ್ಯಕ್ಷ, ವಿಚಾರವಾದಿ ನಿಜಗುಣಾನಂದ ಸ್ವಾಮೀಜಿ ಇಂದಿಲ್ಲಿ ಹೇಳಿದರು. ಶನಿವಾರ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಸಪ್ನ ಬುಕ್ ಹೌಸ್ ವತಿಯಿಂದ ಹಿರಿಯಸಾಹಿತಿ ಕುಂ.ವೀರಭದ್ರಪ್ಪಅವರ ‘ಕತ್ತೆಗೊಂದು ಕಾಲ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗೋವು, ಅದರ ಹಾಲು ಮತ್ತು ಗೋಮೂತ್ರಕ್ಕೆ ಪ್ರಾಮುಖ್ಯತೆ ನೀಡುವುದು ಸರಿಯಲ್ಲ. ನಾಯಿ ಸಹ ಗೋವಿಗಿಂತ ಹೆಚ್ಚು ಬುದ್ಧಿ ಹೊಂದಿದೆ. ಅಷ್ಟೇ ಏಕೆ, ಹಿರಿಯ ಐಪಿಎಸ್ ಅಧಿಕಾರಿಗಳ ಕೈಯಲ್ಲೂ ಆಗದ ಕೆಲಸವನ್ನು, ಹಲವು ಗಂಭೀರ ಅಪರಾಧ ಪ್ರಕರಣಗಳನ್ನು ಒಂದು ನಾಯಿ ಪತ್ತೆ ಹಚ್ಚಿ ಭೇದಿಸುತ್ತದೆ. ಇಂತಹ ಅನೇಕ ಪ್ರಾಣಿಗಳು ನಮ್ಮ ಅನುಕೂಲಕ್ಕೆ ಶ್ರಮಿಸುತ್ತಿವೆ. ಹೀಗಿರುವಾಗ ಇತರೆ ಪ್ರಾಣಿಗಳಿಗೆ ಪ್ರಾಮುಖ್ಯತೆ ನೀಡದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು…

Read More