ಪೇಯ್ಡ್ ನ್ಯೂಸ್ ಬಗ್ಗೆ ದೈನಂದಿನ ವರದಿ ಕಣ್ಗಾವಲು

 ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪೇಯ್ಡ್ ನ್ಯೂಸ್ ಎಂಬುದು ಅತ್ಯಂತ ಕೆಟ್ಟ ಮಾದರಿಯಾಗಿದ್ದು, ಜಿಲ್ಲೆಯಲ್ಲಿ ಪ್ರಕಟಗೊಳ್ಳುವ ಪ್ರತಿಯೊಂದು ನಿಯತಕಾಲಿಕೆ, ದಿನಪತ್ರಿಕೆಗಳು, ಕೇಬಲ್ ಟಿ.ವಿ. ಹಾಗೂ ಟಿ.ವಿ. ಸುದ್ದಿವಾಹಿನಿಗಳ ಬಗ್ಗೆ ಆಯಾ ಕ್ಷೇತ್ರ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕಣ್ಗಾವಲು ಇರಿಸಬೇಕು. ಆಯಾ ಕ್ಷೇತ್ರ ಚುನಾವಣಾಧಿಕಾರಿಗಳ ಕಚೇರಿಯಿಂದ ಚುನಾವಣಾ ಆಯೋಗ ನಿಗದಿಪಡಿಸಿರುವ ನಿಗದಿತ ನಮೂನೆಯಲ್ಲಿ ಪ್ರತಿ ಅಭ್ಯರ್ಥಿವಾರು ವರದಿಯನ್ನು ನಿತ್ಯ ಬೆಳಿಗ್ಗೆ ೯ ಗಂಟೆಯ ಒಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಈ ವರದಿಯನ್ನು ಆಧರಿಸಿ, ಅಭ್ಯರ್ಥಿವಾರು ವೆಚ್ಚವನ್ನು ನಿಗದಿಪಡಿಸಿ, ಅಕೌಂಟಿಂಗ್ ಟೀಂ ಗೆ ಎಂಸಿಎಂಸಿ ಸಮಿತಿಯಿಂದ ವರದಿ ಸಲ್ಲಿಸಲಾಗುವುದು. ಶಂಕಾಸ್ಪದ ಪೇಯ್ಡ್‌ನ್ಯೂಸ್ ಕಂಡುಬಂದರೂ, ಸಂಬಂಧಪಟ್ಟ ಅಭ್ಯರ್ಥಿಗೆ ನೋಟೀಸ್ ಜಾರಿಗೊಳಿಸಬೇಕು. ೨೪ ಗಂಟೆಯ ಒಳಗಾಗಿ ಅಭ್ಯರ್ಥಿಯು ನೋಟೀಸ್‌ಗೆ ಉತ್ತರಿಸಬೇಕಾಗುತ್ತದೆ. ಪೇಯ್ಡ್‌ನ್ಯೂಸ್ ಬಗ್ಗೆ ಎಂಸಿಎಂಸಿ ಸಮಿತಿಯಿಂದ ಖಚಿತಪಟ್ಟಲ್ಲಿ, ಸಂಬಂಧಪಟ್ಟ ಮಾಧ್ಯಮದ ಮೇಲೆ ಕ್ರಮ ಕೈಗೊಳ್ಳಲು ರಾಜ್ಯ ಚುನಾವಣಾ ಆಯೋಗ ಮೂಲಕ…

Read More