ನಮ್ಮ ಪ್ರಜಾಪ್ರಭುತ್ವ ಸುರಕ್ಷಿತವಾಗಿದೆಯೇ?-ಸನತ್ ಕುಮಾರ ಬೆಳಗಲಿ

ಈ ಬಾರಿ ಬಿಜೆಪಿ ಚುನಾವಣೆ ಉಸ್ತುವಾರಿಯನ್ನು ಆರೆಸ್ಸೆಸ್ ವಹಿಸಿಕೊಂಡಿದೆ. ಪ್ರತೀ ಬೂತ್ ಮಟ್ಟಕ್ಕೂ ನೂರಾರು ಕಾರ್ಯಕರ್ತರು ಬಂದಿದ್ದಾರೆ. 60 ಮತದಾರರಿಗೆ ಒಬ್ಬ ಕಾರ್ಯಕರ್ತನನ್ನು ಮನವೊಲಿಸಲು ನೇಮಕ ಮಾಡಲಾಗಿದೆ. ಮತದಾರರ ಪಟ್ಟಿಯ ಪ್ರತಿಯೊಂದು ಪುಟಕ್ಕೂ ಪುಟ ಪ್ರಮುಖರನ್ನು ನೇಮಕ ಮಾಡಲಾಗಿದೆ. ಇಂತಹ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವವಾದಿ ಶಕ್ತಿಗಳು ಎಚ್ಚರದಿಂದ ಹೆಜ್ಜೆ ಇಡಬೇಕಿದೆ. ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಬಿಜೆಪಿ ಮಾತನಾಡುತ್ತಿದ್ದರೂ ಅದು ಬಯಸುತ್ತಿರುವುದು ಪ್ರತಿಪಕ್ಷ ಮುಕ್ತ ಮತ್ತು ಪ್ರಜಾಪ್ರಭುತ್ವ ಮುಕ್ತ ಭಾರತವನ್ನು. ತ್ರಿಪುರಾ ಚುನಾವಣೆ ಫಲಿತಾಂಶದ ನಂತರ ಕೇರಳವನ್ನು ಕಮ್ಯುನಿಸ್ಟರಿಂದ ಮುಕ್ತಗೊಳಿಸುವುದಾಗಿ ಬಿಜೆಪಿ ಹೇಳಿದೆ. ದೇಶವನ್ನು ಪ್ರಜಾಪ್ರಭುತ್ವದಿಂದ ಮುಕ್ತಗೊಳಿಸಿ, ಸಾಮಾಜಿಕ ಸಮಾನತೆಯನ್ನು ನಾಶಗೊಳಿಸುವುದು ಅದರ ನಿಜವಾದ ಗುರಿಯಾಗಿದೆ. ಮೋದಿಯವರ ಅಧಿಕಾರ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂಬುದು ಈ ದೇಶದ ಮೇಲ್ವರ್ಗಗಳ ಮತ್ತು ಮೇಲ್ಜಾತಿಗಳ ಹೆಬ್ಬಯಕೆಯಾಗಿದೆ. ಭಾರತದಲ್ಲಿ ಈಗ ಪ್ರಜಾಪ್ರಭುತ್ವ ಸುರಕ್ಷಿತವಾಗಿದೆಯೇ? ಈ ಪ್ರಶ್ನೆ ಕಳೆದ…

Read More