ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ: ಮಾತೆ ಮಹಾದೇವಿ

‘ಚಕ್ರವರ್ತಿ ಸೂಲಿಬೆಲೆಗೆ ಮತೀಯ ಭ್ರಾಂತಿ ತಲೆಗೇರಿದೆ’  ಕೂಡಲಸಂಗಮ,ಎ.02: ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮ ಮತ್ತು ಲಿಂಗಾಯತರು ಧಾರ್ಮಿಕ ಅಲ್ಪ ಸಂಖ್ಯಾತರು ಎಂದು, ಮಾರ್ಚ್ 23 ರಂದು ಕೈಗೊಂಡ ನಿರ್ಣಯವನ್ನು ಶಿಫಾರಸು ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂಬುದನ್ನು ಅಲ್ಲಗಳೆದು ಕೇಂದ್ರಕ್ಕೆ ಅದು ತಲುಪಿಲ್ಲ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರದ ಮೇಲೆ ಗೂಬೆ ಕೂರಿಸಲು ನೀಡಿರುವ ಹೇಳಿಕೆ. ಇದು ಸತ್ಯವಲ್ಲ ಎಂದು ಕೂಡಲಸಂಗಮ ಬಸವಧರ್ಮಪೀಠದ ಪೀಠಾಧ್ಯಕ್ಷೆ ಮಹಾ ಜಗದ್ಗುರು ಮಾತೆಮಹಾದೇವಿ ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಧಾರ್ಮಿಕ ಅಲ್ಪ ಸಂಖ್ಯಾತರ ಕಾರ್ಯಾಲಯಕ್ಕೆ ಕರ್ನಾಟಕ ಸರ್ಕಾರದ ಶಿಫಾರಸು ತಲುಪಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ಶಿಫಾರಸು ತಲುಪಿದ ಸಮಯದಲ್ಲಿ ಬಸವಧರ್ಮ ಪೀಠದ ಬಸವ ಕುಮಾರಸ್ವಾಮಿಗಳು ಕೇಂದ್ರದ ಕಾರ್ಯಾಲಯದಲ್ಲಿಯೇ ಕುಳಿತಿದ್ದರು. ಲೋಕಸಭೆಯಲ್ಲಿ ನಳಿನ್‌ ಕುಮಾರ್ ಕಟೀಲ್‌ರವರು, ಶಿಫಾರಸು ಕರ್ನಾಟಕ ಸರ್ಕಾರದಿಂದ…

Read More