ತಂಗಡಗಿ ಚಾಣಾಕ್ಷತನಕ್ಕೆ ಅತಂತ್ರ ಕೈ ನಾಯಕ ಬಿಜೆಪಿಗೆ

ನಾಗಪ್ಪ ಸಾಲೋಣಿಗೆ ಪರ್ಯಾಯವಾಗಿ ಕುರುಬ ಸಮುದಾಯದ ನಾಯಕರನ್ನು ಬೆಳೆಸಿರುವ ತಂಗಡಗಿ ಚಾಣಾಕ್ಷತನಕ್ಕೆ ಅತಂತ್ರಗೊಂಡ ನಾಯಕ ಬಿಜೆಪಿ ಸೇರಲು ರೆಡಿ ಕೊಪ್ಪಳದ ಕಾಂಗ್ರೇಸಿನ ಪ್ರಭಾವಿ ಮುಖಂಡ ಹಾಗೂ ಕುರುಬ ಸಮುದಾಯದ ಪ್ರಭಾವಿ ನಾಯಕ ಮಾಜಿ ಸಚಿವ ಸಾಲೋಣಿ ನಾಗಪ್ಪ ಇದೀಗ ಬಿಜೆಪಿ ಸೆರ್ಪಡೆಯಾಗಲು ವೇದಿಕೆ ಸಿದ್ದವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೊಪ್ಪಳದ ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ಬಿಜೆಪಿ ನಾಯಕರು ಸಾಲೋಣಿ ನಾಗಪ್ಪರವರ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಇದಕ್ಕೆ ಸಾಲೋಣಿ ನಾಗಪ್ಪ ಸಹ ಸಹಮತ ವ್ಯಕ್ತಪಡಿಸಿದ್ದು, ಇದೇ 5 ಅಥವಾ 6 ತಾರೀಖಿನಂದು ಬಿಜೆಪಿ ಸೆರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಕನಕಗಿರಿ ಕ್ಷೇತ್ರದಲ್ಲಿ ಕುರುಬ ಸಮುದಾಯ ಮತಗಳು ಹೆಚ್ಚು ಇರೋದ್ರಿಂದ ಒಂದು ವೇಳೆ ಸಾಲೋಣಿ ನಾಗಪ್ಪ ಬಿಜೆಪಿ ಸೆರ್ಪಡೆಯಾದ್ರೆ ಕಾಂಗ್ರೇಸ್ ಗೆ ಹೊಡೆತ ಕೊಡಲಿದೆ ಎಂದೇ ಹೇಳಲಾಗಿದೆ. ಸಾಲೋಣಿ ನಾಗಪ್ಪ ಬಿಜೆಪಿಗೆ ಆಗಮನದಿಂದ ಬಿಜೆಪಿ…

Read More