ಕರ್ನಾಟಕ ಗೆಲ್ಲಲು ಬಿಜೆಪಿಯ ತಂತ್ರ ಕುತಂತ್ರ-ಸನತ್ ಕುಮಾರ್ ಬೆಳಗಲಿ

ಹನ್ನೆರಡನೇ ಶತಮಾನದಿಂದ ಮನುವಾದಿಗಳು ಈ ಹುನ್ನಾರಗಳನ್ನು ಮಾಡುತ್ತಲೇ ಬಂದಿದ್ದಾರೆ. ಕಲ್ಯಾಣ ಕ್ರಾಂತಿ ವಿಫಲವಾದರೂ ಕೂಡ ಬಸವಣ್ಣ ನಮ್ಮ ನಡುವೆ ಇನ್ನೂ ಜೀವಂತವಿದ್ದಾರೆ. ಈ ನಾಡು ಗುಜರಾತಿನಂತೆ ಕೋಮುವಾದಿ ವಿಷಸರ್ಪಗಳ ಹುತ್ತವಾಗುವುದನ್ನು ತಡೆಯುವುದು ಪ್ರಜ್ಞಾವಂತರ ಜವಾಬ್ದಾರಿಯಾಗಿದೆ.ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸುವುದರ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಂಕಲ್ಪ ತೊಡಬೇಕಾಗಿದೆ. ಸಿದ್ದರಾಮಯ್ಯನವರ ಆಡಳಿತದಲ್ಲಿ ರಾಜ್ಯದ ಜನ ನಂಬಿಕೆ ಕಳೆದುಕೊಳ್ಳಲಿಲ್ಲ. ಈ ಸರಕಾರದ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಯಾವ ಮಂತ್ರಿಯೂ ಜೈಲಿಗೆ ಹೋಗಿ ಬಂದಿಲ್ಲ. ಹಳ್ಳಿಯ ಬಡವರಿಗೂ ಇದು ತಮ್ಮದೇ ಸರಕಾರವೆನಿಸಿದೆ. ಕರ್ನಾಟಕವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಬಿಜೆಪಿ ಹರಸಾಹಸ ಪಡುತ್ತಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬರೀ ಒಣ ಪ್ರತಿಷ್ಠೆಯಲ್ಲ. ಈ ಚುನಾವಣೆ ಅತ್ಯಂತ ನಿರ್ಣಾಯಕವಾಗಿರುವುದರಿಂದ ಅವರು ಗೆಲ್ಲಲೇಬೇಕಾಗಿದೆ. ಮುಂದಿನ 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೆ…

Read More