ಕಷ್ಟಕರ ಪರಿಸ್ಥಿತಿಯಲ್ಲೂ ಯುಎಇಯಿಂದ ಶ್ರೀದೇವಿ ಮೃತದೇಹ ಭಾರತಕ್ಕೆ ತರಲು ನೆರವಾದ ಅಶ್ರಫ್

ಕಷ್ಟಕರ ಪರಿಸ್ಥಿತಿಯಲ್ಲೂ ಯುಎಇಯಿಂದ ಶ್ರೀದೇವಿ ಮೃತದೇಹ ಭಾರತಕ್ಕೆ ತರಲು ನೆರವಾದ ಅಶ್ರಫ್ ದುಬೈ, : ಕ್ಯಾಮೆರಾ ಫ್ಲ್ಯಾಷ್ ಹಾಗೂ ಲಕ್ಷಾಂತರ ಅಭಿಮಾನಿಗಳ ಕಣ್ಣು ತಪ್ಪಿಸಿ ಬಾಲಿವುಡ್ ನಟಿ ಶ್ರೀದೇವಿ ಪಾರ್ಥಿವ ಶರೀರವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನ ಸರಳ ಶವಾಗಾರಕ್ಕೆ ತಂದು, ಅಲ್ಲಿಂದ ಭಾರತಕ್ಕೆ ಸುಗಮವಾಗಿ ಸಾಗಿಸಲು ನೆರವಾದ ಕೇರಳ ಮೂಲದ ಈ ವ್ಯಕ್ತಿ ತೆರೆಮರೆಯ ನಾಯಕ. ಎಲ್ಲಾ ಮಾಧ್ಯಮಗಳಲ್ಲೂ ಇವರದ್ದೇ ಸುದ್ದಿ. ಅಶ್ರಫ್ ಎಂದಷ್ಟೇ ಅಧಿಕೃತ ದಾಖಲೆಗಳಲ್ಲಿ ನೋಂದಾಯಿಸಿಕೊಂಡಿರುವ ಅಶ್ರಫ್ ಶೆರ್ರಿ ಥಾಮರಸ್ಸೇರಿ (44) ಮೂಲತಃ ಕೇರಳದವರು. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಬೇರೆ ದೇಶದ ಯಾರೇ ನಿಧನರಾದರೂ ಅವರ ಶವವನ್ನು ಸ್ವದೇಶಕ್ಕೆ ಸುಗಮವಾಗಿ ಸಾಗಿಸಲು ನೆರವಾಗುವುದು ಇವರ ವಿಶೇಷತೆ. ಸಾಲದ ಹೊರೆ ಹೊತ್ತ ಕಾರ್ಮಿಕರಿಂದ ಹಿಡಿದು, ಆಗರ್ಭ ಶ್ರೀಮಂತರವರೆಗೆ ವಿಶ್ವದ 38 ದೇಶಗಳ 4,700ಕ್ಕೂ ಹೆಚ್ಚು ಮಂದಿಯ ಪಾರ್ಥಿವ ಶರೀರವನ್ನು ಸ್ವದೇಶಗಳಿಗೆ ಕಳುಹಿಸಲು ಅಶ್ರಫ್…

Read More