10 ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಪ್ರೊ. ಟಿ. ವಿ. ಕಟ್ಟೀಮನಿ

ಸರ್ವಾನು ಮತದಿಂದ ಆಯ್ಕೆ ಕೊಪ್ಪಳ: ಮಾರ್ಚ 20 ಮತ್ತು 21 ಅಳವಂಡಿಯಲ್ಲಿ ನೆಡೆಯುವ 10 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶ್ರೀಯುತ ಪ್ರೊ. ಟಿ.ವಿ.ಕಟ್ಟೀಮನಿ,ರವರನ್ನು ಕಸಾಪ ಕಾರ್ಯಕಾರಿ ಮಂಡಳಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಶನಿವಾರ ಮಧ್ಯಾಹ್ನ 02 ಘಂಟೆಗೆ ಜಿಲ್ಲಾ ಸಹಕಾರ ಯೂನಿಯನ್ ಸಭಾಭವನದಲ್ಲಿ ಜರುಗಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಅವಿರೋಧವಾಗಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲೆಗೆ ಸಾಹಿತ್ಯಿಕ ಕೊಡುಗೆ ನೀಡಿದ ಸಾಹಿತಿಗಳಾದ ಶರಣಪ್ಪ ಮೇಟ್ರಿ, ಉದಯಶಂಕರ ಪುರಾಣಿಕ, ಡಾ|| ವಿ.ಬಿ.ರಡ್ಡರ್, ಶರಣಬಸಪ್ಪ ಕೊಲ್ಕಾರ, ಟಿ.ವಿ.ಮಾಗಳದ, ಜನಪದ ಸಾಹಿತಿ ಮಾರೆಪ್ಪ ಮಾರೆಪ್ಪ ದಾಸರ ಸೇರಿದಂತೆ ಹಲವು ಸಾಹಿತಿಗಳ ಹೆಸರು ಪ್ರಸ್ತಾಪಗೊಂಡವು ಅಂತಿಮವಾಗಿ ಶ್ರೀಯುತ ಪ್ರೊ. ಟಿ. ವಿ. ಕಟ್ಟೀಮನಿರವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು. ಗಂಗಾವತಿ ತಾಲೂಕ ಕಸಾಪ ಅಧ್ಯಕ್ಷ ಎಸ್.ಬಿ.ಗೊಂಡಬಾಳ ಪ್ರೊ. ಟಿ.ವಿ.ಕಟ್ಟೀಮನಿ ಅವರ ಹೆಸರನ್ನು…

Read More