ರಾಹುಲ್ ಗಾಂಧಿ ಮಾತಿಗೆ ಸಿ.ವಿ. ಚಂದ್ರಶೇಖರ ಕಿಡಿ

ಪ್ರಧಾನಿ ನರೇಂದ್ರ ಮೋದಿಯವರು ಸಿದ್ರಾಮಯ್ಯನ ಆಡಳಿತ ನೋಡಿ ಕಲಿಯಬೇಕೆಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತಿಗೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ.ವಿ. ಚಂದ್ರಶೇಖರ ಕಿಡಿ ಕಾರಿದ್ದಾರೆ.  ಅಕ್ಷರಶಃ ಗುಂಡಾರಾಜ್ಯದಂತಹ ವ್ಯವಸ್ಥೆಯನ್ನು ಹುಟ್ಟು ಹಾಕಿರುವ ಸಿದ್ದರಾಮಯ್ಯನ ಸರ್ಕಾರ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತುವ ಕೆಲಸ ಮಾಡುತ್ತಿದೆ. ಧಕ್ಷ ಅಧಿಕಾರಿಗಳ ಕೊಲೆಗಳು, ವರ್ಗಾವಣೆ, ಕೆಲ ಸಮುಧಾಯಗಳ ಓಲೈಕೆ ರಾಜಕಾರಣ, ಹಿಂದು ಯುವಕರ, ಮುಖಂಡರ ಹತ್ಯೆಗಳು, ಬಾಯಿಗೆ ಬಂದಂತೆ ಹರಟುವ ಸಚಿವ ಸಂಪುಟ ಹೀಗೆ ರಾಜ್ಯದ ಜನತೆಗೆ ಉಸಿರು ಗಟ್ಟಿಸುವ ವಾತವರಣ ಸೃಷ್ಠಿಸಿರುವ ಸಿದ್ದರಾಮಯ್ಯನನ್ನು ನೋಡಿ, ಅವರ ಆಡಳಿತವನ್ನು ನೋಡಿ ಕಲಿಯುವ ಅವಶ್ಯಕತೆ ಈ ದೇಶದ ಪ್ರಧಾನ ಮಂತ್ರಿಗಳಿಗೆ ಇಲ್ಲ. ಅಲ್ಲದೇ ಕಾಂಗ್ರೆಸ್ ನಾಯಕರೆಲ್ಲ ಹೇಳುವ ಹಾಗೆ ನಮ್ಮ ಅಧ್ಯಕ್ಷರು ನಮ್ಮ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಅಂತಾರಲ್ಲ ಒಬ್ಬ ಪ್ರಧಾನಿ ಅಭ್ಯರ್ಥಿ…

Read More