ಇಂದು ಡೊಂಬ್ರಳ್ಳಿ ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ

ಕೊಪ್ಪಳ :  ತಾಲೂಕಿನ ಡೊಂಬ್ರಳ್ಳಿ ಗ್ರಾಮದಲ್ಲಿ ಶ್ರೀ ಮಾರುತೇಶ ಪಾಂಡುರಂಗ ರುಕ್ಷ್ಮೀಣಿ ಹಾಗೂ ನವಗ್ರಹ ಮತ್ತು ನಾಗಪ್ಪ ದೇವರುಗಳ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ . ೬ರಂದು ವಿಜೃಂ‘ಣೆಯಿಂದ ಜರುಗಲಿದೆ. ಬಿಕನಹಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿ‘ ವಹಿಸಿ ಮೆರವಣಿಗೆಗೆ ಚಾಲನೆ ನೀಡುವರು. ಇದೇ ವೇಳೆ ‘ವ್ಯ ‘ಜನ ಹಾಗೂ ಮಂಗಳ ವಾದ್ಯಗಳೊಂದಿಗೆ ಗಂಗೆ ಪೂಜೆಗೆ ಹೋಗಲಾಗುತ್ತದೆ. ನಂತರ ಗ್ರಾಮದ ರಾಜಬೀದಿಯಲ್ಲಿ ಬೆಳಗ್ಗೆ ೮ ಗಂಟೆಗೆ ಗ್ರಾಮದ ಮುತೈದೆಯರಿಂದ ಕುಂ‘ಗಳೊಂದಿಗೆ ಎಲ್ಲ ಮೂರ್ತಿಗಳ ಮೆರವಣಿಗೆಯು ರಾಜಬೀದಿಯಲ್ಲಿ ಸಾಗಿ ದೇವಸ್ಥಾನ ತಲುಪುವುದು. ಮ. ೧ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಮ. ೩ಗಂಟೆಗೆ ಹೋಮ ಕಾರ್ಯಕ್ರಮ, ಮೂರ್ತಿಗಳ ಜಲವಾಸ, ‘ನ್ಯವಾಸ, ಗಂ‘ವಾಸ, ಪುಷ್ಪವಾಸ ನಂತರ ಶಹನವಾಸ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಜರುಗಲಿವೆ. ಸಂಜೆ ೬-೩೦ ಗಂಟೆಗೆ ದೇವಸ್ಥಾನದ ಎದುರು ಹಾಕಿದ ವೇದಿಕೆಯಲ್ಲಿ ಜಾನಪದ ವೈವಿದ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೇ ಜೋಗಿತಿ ನೃತ್ಯ…

Read More