ಜನರೇ ಜನತಂತ್ರದ ಕಾವಲುಗಾರರು-ಸನತ್ ಕುಮಾರ್ ಬೆಳಗಲಿ

ಭಾರತ ಎಂಬುದು ಜಗತ್ತಿನಲ್ಲೇ ತುಂಬ ವಿಶಿಷ್ಟವಾದ, ವಿಭಿನ್ನವಾದ ದೇಶ. ಈ ವಿಶಾಲ ದೇಶದಲ್ಲಿ ಒಂದೇ ಸಮುದಾಯದ, ಒಂದೇ ಧರ್ಮದ, ಒಂದೇ ಜನಾಂಗದ, ಒಂದೇ ಭಾಷೆಯ, ಒಂದೇ ಸಂಸ್ಕೃತಿಯ ಜನರಿಲ್ಲ. ಇದು ಎಲ್ಲ ಧರ್ಮ, ಸಂಸ್ಕೃತಿ, ಭಾಷೆಗಳ ಸಂಗಮ. ಇಲ್ಲಿ ಒಂದೇ ಧರ್ಮ, ಸಂಸ್ಕೃತಿ ಹೇರಲು ಹೊರಟರೆ ಆರಂಭದಲ್ಲಿ ಒಂದಿಷ್ಟು ಉತ್ತೇಜನಾಕಾರಿ ಫಲಿತಾಂಶ ಸಿಗಬಹುದು. ಆದರೆ ಕೊನೆಗೆ ಇಂತಹ ಯತ್ನ ವಿಫಲಗೊಳ್ಳುತ್ತದೆ. ರಾಜಸ್ಥಾನ ವಿಧಾನಸಭೆಯ ಒಂದು ಮತ್ತು ಲೋಕಸಭೆಯ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಆ ರಾಜ್ಯದ ಆಡಳಿತಾರೂಢ ಪಕ್ಷ ಬಿಜೆಪಿಗೆ ಚೇತರಿಸಲಾಗದ ಪೆಟ್ಟು ನೀಡಿದೆ. ಗುಜರಾತ್ ನಂತರ ಹಿಂದೂರಾಷ್ಟ್ರ ನಿರ್ಮಾಣದ ಎರಡನೇ ಪ್ರಯೋಗ ಶಾಲೆಯೆಂದು ಕರೆಯಲ್ಪಡುತ್ತಿರುವ ರಾಜಸ್ಥಾನದಲ್ಲಿ ಜನತೆ ನೀಡಿದ ತೀರ್ಪು ಗಮನಾರ್ಹವಾಗಿದೆ. ಸಂಘಪರಿವಾರದ ಕೋಮುಧ್ರುವೀಕರಣದ ಇತಿಮಿತಿಗಳನ್ನು ಎತ್ತಿ ತೋರಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಗಳ ಸ್ವರೂಪದ ಮುನ್ಸೂಚನೆಯನ್ನು ಈ ಫಲಿತಾಂಶ ನೀಡಿದೆ. ಗುಜರಾತ್‌ನಲ್ಲಿ ಬಿಜೆಪಿ ಅತ್ಯಂತ…

Read More