ಕಲಬುರಗಿ ರಂಗಾಯಣಕ್ಕೆ ನಟ/ನಟಿ ಆಯ್ಕೆ : ಅರ್ಜಿ ಆಹ್ವಾನ

ಕಲಬುರಗಿ ರಂಗಾಯಣಕ್ಕೆ ತಾತ್ಕಾಲಿಕವಾಗಿ ೩ ವರ್ಷಗಳ ಅವಧಿಗೆ ಒಬ್ಬ ನಟ/ನಟಿಯನ್ನು ಆಯ್ಕ್ಕೆ ಮಾಡಿಕೊಂಡು ರೆಪರ್ಟರಿ ಪ್ರಾರಂಭಿಸಲಾಗುತ್ತಿದೆ. ಆಸಕ್ತರು ಈ ಕೆಳಕಂಡ ನಿಬಂಧನೆಯ ಪ್ರಕಾರ ಅರ್ಜಿಯನ್ನು ಸಲ್ಲಿಸಬಹುದು. ಕಲಬುರಗಿ ರಂಗಾಯಣಕ್ಕೆ ಒಬ್ಬ ನಟ/ನಟಿಯನ್ನು ಹೊರಗುತ್ತಿಗೆ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು. ರಂಗ ಪರಿಣತಿಯೇ ಪ್ರಥಮ ಅರ್ಹತೆ ಹಾಗೂ ರಂಗ ಶಿಕ್ಷಣದ ಅರ್ಹತೆಗಳು ಅಪೇಕ್ಷೆಣೀಯ ಹೊರತು ಕಡ್ಡಾಯವಲ್ಲ. ರಂಗಪ್ರಯೋಗಗಳಲ್ಲಿ ಭಾಗವಹಿಸುವವರಿಗೆ ಆದ್ಯತೆಯನ್ನು ನೀಡಲಾಗುವುದು. ಕಲಾವಿದರ ವಯಸ್ಸು ಗರಿಷ್ಟ ೨೫ ವರ್ಷ ಮೀರಬಾರದು. ಆಯ್ಕೆಯಾದ ಕಲಾವಿದರಿಗೆ ಮೊದಲ ವರ್ಷದಲ್ಲಿ ಸಂಚಿತ ವೇತನವನ್ನು ಮಾಸಿಕ ರೂ. ೧೨,೦೦೦/- ಎರಡನೇ ವರ್ಷದಲ್ಲಿ ಮಾಸಿಕ ರೂ. ೧೪,೦೦೦/- ಹಾಗೂ ಮೂರನೇ ವರ್ಷದಲ್ಲಿ ಮಾಸಿಕ ರೂ. ೧೬,೦೦೦/- ಗಳನ್ನು ಕ್ರೂಢೀಕೃತ ಸಂಬಳವಾಗಿ ನೀಡಲಾಗುವುದು. ಇತರೆ ಯಾವುದೇ ಭತ್ಯೆಗಳನ್ನು ನೀಡುವುದಿಲ್ಲ. ಪಾರಂಪರಿಕ ಕಲೆಯ ಕುಟುಂಬಗಳಿಂದ ಬಂದ ಹಾಗೂ ರಂಗ ಶಿಕ್ಷಣದ ಪದವಿ ಪಡೆದು ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಇಂತಹ ಪ್ರಕರಣದಲ್ಲಿ…

Read More