You are here
Home > 2018 > January > 31

ಕೊಡದಾಳ; ಮಕ್ಕಳಿಂದ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು

ಕೊಪ್ಪಳ ಜ.೩೦; ತಾಲ್ಲೂಕಿನ ಕೊಡದಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಗಣರಾಜ್ಯೋತ್ಸವ ದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ . ಕೊಪ್ಪಳದವರೇ ಆದ ಯುವಬರಹಗಾರ ನಾಗರಾಜನಾಯಕ ಡಿ ಡೊಳ್ಳಿನ ರಚಿಸಿದ "ತಂಬಿಗೆ ಸಿದ್ಧ ನಿದ್ದೇಲಿ ಎದ್ದ" ಕಥೆಯನ್ನು ನಾಟಕವಾಗಿ ಅಭಿನಯಿಸಿದರು. ಈ ಕಥೆಯನ್ನು ರಂಗದ ಮೇಲೆ ತರಲು ಅದೇ ಗ್ರಾಮದ ವಿಸ್ತಾರ ಸಂಸ್ಥೆಯ ನಾಟಕ ಕಲೆ ಡಿಪ್ಲೋಮಾ ಪದವೀಧರ ಹುಲ್ಲೇಶ್ ಹರಿಜನ ಮಾರ್ಗದರ್ಶನ ನೀಡಿ, ಮಕ್ಕಳಿಗೆ ನೃತ್ಯ, ನಾಟಕ ಕಲಿಸಿ ನಿರ್ದೇಶನ ಮಾಡಿದರು.

Top