ಕಲ್ಪನಾ ಚಾವ್ಲಾಗೆ ಒಂದು ಆತ್ಮೀಯ ಪತ್ರ…..

(ಕಲ್ಪನಾ ಚಾವ್ಲಾ ಗಗನಯಾತ್ರೆ ಕೈಗೊಂಡು ಇಂದಿಗೆ (2003 ಜನವರಿ 16) 15 ವರ್ಷ.) ರಾಹುಲ ಬೆಳಗಲಿ ನಾನಾಗ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿದ್ಯಾರ್ಥಿ.ಆಕೆಯ ಗಗನಯಾನದ ಬಗ್ಗೆ ತುಂಬಾ ಕುತೂಹಲವಿತ್ತು. ಆದರೆ ಆಕೆಯ ದುರಂತ ಅಂತ್ಯವಾಗಿದ್ದು ತುಂಬಾ ಬೇಸರ ಮೂಡಿಸಿತ್ತು. ಆಗ ಒಬ್ಬ ವಿದ್ಯಾರ್ಥಿಯಾಗಿ ಮತ್ತು ಅಭಿಮಾನಿಯಾಗಿ ಏಕವಚನದಲ್ಲಿ ಪತ್ರ ಬರೆದಿದ್ದೆ. ಆಗ ನಮ್ಮ ವಿಭಾಗವು ಪ್ರಕಟಿಸುತ್ತಿದ್ದ ವಿದ್ಯಾಸಮಾಚಾರದಲ್ಲಿ ಪ್ರಕಟವಾಯಿತು. ಕೆಲ ತಿಂಗಳುಗಳ ಬಳಿಕ ಉದಯವಾಣಿಯ ಮಹಿಳಾ ಸಂಪದದಲ್ಲೂ ಪ್ರಕಟವಾಯಿತು. ಮನೆಯಲ್ಲಿ ಯಾವುದೋ ಕಾರಣಕ್ಕೆ ಹುಡುಕಾಟ ನಡೆಸಿದಾಗ, ಆ ಪತ್ರ ಮತ್ತೆ ಸಿಕ್ಕಿತು. ಇವತ್ತು ಜನವರಿ 16. 15 ವರ್ಷ ಹಿಂದಿನ ನೆನಪು ಮರುಕಳಿಸಿತು) ಪ್ರೀತಿಯ ಕಲ್ಪನಾ, ಎಷ್ಟೋ ಸಲ ನಿನಗೆ ಪತ್ರ ಬರೆಯಬೇಕು ಅಂದ್ಕೊಂಡಿದ್ದೆ. ಆದರೆ ಅದೇ ಸಮಯಕ್ಕೆ ಯಾವುದಾದರೂ ಕೆಲಸ ಅಡ್ಡ ಬಂದುಬಿಡೋದು. ಅದು-ಇದು ಅಂತ ಮುಂದೆ ಹಾಕುತ್ತ ಬಂದಂತೆ ನೋಡೀಗ, ಯಾವ ಪರಿಸ್ಥಿತಿಯಲ್ಲಿ ಪತ್ರ…

Read More