ಸಂವಿಧಾನ ನಾಶಕ್ಕೆ ಸಂಘ ಪರಿವಾರದ ಸಂಚು

ಸನತ್ ಕುಮಾರ್ ಬೆಳಗಲಿ  ನರೇಂದ್ರ ಮೋದಿ ಅವರ ಸರ್ವಾಧಿಕಾರ ವ್ಯಕ್ತಿತ್ವದಿಂದ ಮಾತ್ರ ಜನತಂತ್ರಕ್ಕೆ ಗಂಡಾಂತರ ಬಂದಿದೆ ಎಂದರೆ, ಅದು ಅರ್ಧ ಸತ್ಯವಾಗುತ್ತದೆ. ವ್ಯಕ್ತಿಯಾಗಿ ಸರ್ವಾಧಿಕಾರಿ ಆಗಿರುವುದರ ಜೊತೆಗೆ ಅವರು ಬೆಳೆದು ಬಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಾಗಪುರದಲ್ಲಿ ಕೂತು ಅವರನ್ನು ನಿಯಂತ್ರಿಸುತ್ತಿದೆ. ದಶಕಗಳ ಕಾಲ ಸಂಘದ ಪ್ರಚಾರಕನಾಗಿ ಓಡಾಡಿದ ಮೋದಿಯವರಿಗೂ ಬಿಜೆಪಿಯ ಉಳಿದ ನಾಯಕರಿಗೂ ವ್ಯತ್ಯಾಸವಿದೆ. ಅಟಲ್ ಬಿಹಾರಿ ವಾಜಪೇಯಿ ಸಂಘದಲ್ಲಿಯೇ ಬೆಳೆದು ಬಂದಿದ್ದರೂ ಅವರಿಗೆ ಪ್ರಜಾಪ್ರಭುತ್ವದ ಅಂತಃಸತ್ವದ ಬಗ್ಗೆ ಅರಿವಿತ್ತು. ಭಾರತದಂತಹ ಬಹುಧಾರ್ಮಿಕ, ಬಹುಜನಾಂಗೀಯ ದೇಶದಲ್ಲಿ ಎಲ್ಲರನ್ನೂ ಸಂಬಾಳಿಸಿಕೊಂಡು ಹೋಗುವ ಎಚ್ಚರವಿತ್ತು. ಆದರೆ ಮೋದಿ ಹಾಗಲ್ಲ, ಇವರಿಗೆ ಅಧ್ಯಯನದ ಕೊರತೆಯ ಜೊತೆಗೆ ಭಿನ್ನಮತ ಸಹಿಸದಂತಹ ನಿರಂಕುಶ ಪ್ರವೃತ್ತಿಯಿದೆ. ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಬಹಿರಂಗ ಹೇಳಿಕೆ ನೀಡಿ, ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿನ ಸಮಸ್ಯೆಗಳನ್ನು ಆಂತರಿಕವಾಗಿ…

Read More