ಕೊಪ್ಪಳ ಯಶಸ್ವಿ ಬಂದ್

ಕ್ರೌರ್ಯದ ವಿರುದ್ದ ಧ್ವನಿ ಎತ್ತಿದ ಕೊಪ್ಪಳ, ಭಾಗ್ಯನಗರ ನಾಗರಿಕರು ಕೊಪ್ಪಳ : ಕು.ದಾನಮ್ಮ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ವಿರೋಧಿ ವೇದಿಕೆ ಇಂದು ಕರೆ ನೀಡಿದ್ದ ಕೊಪ್ಪಳ ಸ್ವಯಂ ಪ್ರೇರಿತ ಬಂದ್ ಯಶಸ್ವಿಯಾಗಿದೆ. ಕೊಪ್ಪಳ ನಗರದ ಇತಿಹಾಸಿದಲ್ಲಿಯೆ ದಲಿತ, ಮುಸ್ಲಿಂ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳವರ ನೇತೃತ್ವದಲ್ಲಿ ನಡೆದ ಬಂದ್ ಕರೆ ಇಡೀ ಕೊಪ್ಪಳ ಸ್ಪಂದಿಸಿ ಯಶಸ್ವಿಗೊಳಿಸಿದಿದೆ. ವಿಜಯಪುರ ಬಾಲಕಿ ದಾನಮ್ಮ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಹಾಗೂ ಕೇಂದ್ರ ಸಚಿವ ಅನಂತಕುಮಾರರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ, ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಹತ್ಯೆಗಳ ಕುರಿತು ಕೂಲಂಕುಷ ತನಿಖೆಗೆ ಹಾಗೂ ಮಹಾರಾಷ್ಟ್ರದ ಕೋರೇಗಾಂವ ನ 200 ನೇ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಗಲಭೆಯನ್ನು ಖಂಡಿಸಿ ಇಂದು ಕೊಪ್ಪಳ ಬಂದ್ಗೆ ಕರೆ ನೀಡಲಾಗಿತ್ತು. ಸ್ವಯಂಪ್ರೇರಿತ ಬಂದ್‍ಗೆ ಪೂರಕವಾಗಿ ಸ್ಪಂದಿಸಿದ ನಾಗರಿಕರು, ವರ್ತಕರು, ಶಾಲಾ ಕಾಲೇಜು ಆಡಳಿತ ಮಂಡಳಿಯವರು…

Read More