ಭೀಮಾ ಕೋರೆಗಾಂವ್: ಬರೀ ಸ್ಮಾರಕವಲ್ಲ, ಸಮಾನತೆಯ ಸಂಕೇತ

ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ಭೀಮಾ ಕೋರೆಗಾಂವ್ ಮೂಲಕ ಹೊರ ಹೊಮ್ಮಿದ ದಲಿತ ಶಕ್ತಿ ನುಂಗಲಾರದ ತುತ್ತಾಗಿದೆ. ಮನುವಾದಿ ಪ್ರಾಬಲ್ಯದ ಹಿಂದೂ ರಾಷ್ಟ್ರ ನಿರ್ಮಾಣದ ತಮ್ಮ ಕನಸು ಭಗ್ನಗೊಳ್ಳುತ್ತಿದೆ ಎಂದು ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಕಂಗಾಲಾಗಿದ್ದಾರೆ. ತಮ್ಮ ಬದುಕಿನ ಇಳಿಸಂಜೆಯಲ್ಲಿ ಹಿಂದೂ ರಾಷ್ಟ್ರವನ್ನು ಕಾಣಲು ಆಗಲಿಲ್ಲವೆಂದು ಪೇಜಾವರರು ದಿಗ್ಭ್ರಮೆಗೊಂಡಿದ್ದಾರೆ. ಜನವರಿ 1ನೇ ತಾರೀಕು ಮಹಾರಾಷ್ಟ್ರದ ಭೀಮಾ ಕೋರೆಗಾಂವ್‌ದಲ್ಲಿ ನಡೆದ ಘಟನೆಗಳ ಬಗ್ಗೆ ನಾನಾ ವಿಶ್ಲೇಷಣೆಗಳು ನಡೆದಿವೆ. ಎಲ್ಲಕ್ಕಿಂತ ಮುಖ್ಯವಾಗಿ 2019ರ ಲೋಕಸಭಾ ಚುನಾವಣೆಗೂ ಮುನ್ನ ದಲಿತರನ್ನು ಹಿಂದುತ್ವದ ಬುಟ್ಟಿಗೆ ಹಾಕಿಕೊಂಡು ಕೋಮು ಧ್ರುವೀಕರಣದ ಮೂಲಕ ಹಿಂದೂ ವೋಟ್ ಬ್ಯಾಂಕ್ ಸ್ಥಾಪಿಸಿ, ಮತ್ತೆ ಕೇಂದ್ರದ ಅಧಿಕಾರ ಸೂತ್ರ ಹಿಡಿಯಲು, ಆನಂತರ ಸಂವಿಧಾನಕ್ಕೆ ಚಟ್ಟ ಕಟ್ಟಲು ಸಂಘ ಪರಿವಾರ ನಡೆಸಿದ ಒಳಸಂಚಿಗೆ ದಲಿತರ ಈ ಜಾಗೃತಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತಲೇ ಅಂದು ಶಾಂತಿಯುತವಾಗಿ ಸೇರಿದ ಜನಸಮೂಹದ ಮೇಲೆ…

Read More