ಪಾವಗಡಕ್ಕೆ ನೀರು ಹರಿಸುವುದಕ್ಕೆ ಮತ್ತು ಸಿಂಗಟಾಲೂರ ಏತನೀರಾವರಿ ವತಿಯಿಂದ ಹೆಚ್ಚುವರಿ ನೀರು ಪಡೆಯುವುದಕ್ಕೆ ಖಂಡನೆ

ಕೊಪ್ಪಳ : ಪಾವಗಡಕ್ಕೆ ನೀರು ಹರಿಸುವುದಕ್ಕೆ ಮತ್ತು ಸಿಂಗಟಾಲೂರ ಏತನೀರಾವರಿ ವತಿಯಿಂದ ಹೆಚ್ಚುವರಿ ನೀರು ಪಡೆಯುವುದಕ್ಕೆ ತುಂಗಭದ್ರಾ ಉಳಿಸಿ ಆಂದೋಲನ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ವರ್ಷದಿಂದ ವರ್ಷಕ್ಕೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗತೊಡಗಿದೆ ಜೊತೆಗೆ ೩೨ಟಿಎಂಸಿ ಹೂಳು ತುಂಬಿ ಈ ಭಾಗದ ರೈತರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿಯೂ ಚಿತ್ರದುರ್ಗಾ ಜಿಲ್ಲೆಯ ಪಾವಗಡಕ್ಕೆ ೨.೫ ಟಿಎಂಸಿ ನೀರು ಕೊಡಲು ಮತ್ತು ಸಿಂಗಟಾಲೂರ ಏತನೀರಾವರಿಯಿಂದ ಪ್ರಸ್ತುತ ೧೨.೬ ಟಿಎಂಸಿ ಜತೆಗೆ ೬.೫೨ಟಿಎಂಸಿ ಹೆಚ್ಚು ನೀರು ಪಡೆಯಲು ಸರ್ಕಾರ ಅನುಮೋದಿಸಿರುವುದನ್ನು ತುಂಗಭದ್ರಾ ಉಳಿಸಿ ಆಂದೋಲನ ಸಮಿತಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಚರ್ಚಿಸಲು ಜ.೫ ರಂದು ಮುನಿರಾಬಾದ್ ಪಂಪಾವನದಲ್ಲಿ ಕರೆದ ತುರ್ತು ಸಭೆಯಲ್ಲಿ ಸರ್ಕಾರದ ಧೋರಣೆಯನ್ನು ಆಕ್ರೋಶದಿಂದ ವಿರೋಧಿಸಿದ ರೈತ ಮುಖಂಡರು ಇದಕ್ಕೆ ತಕ್ಷಣ ಜನಪ್ರತಿನಿಧಿಗಳಿಗೆ ಮನವಿ ನೀಡಿ ಎಚ್ಚರಿಸಲು ತಿರ್ಮಾನಿಸಿದರಲ್ಲದೆ ಧರಣಿ ನಡೆಸಿ ಜನವರಿ ೧೮ ರಂದು ಮುನಿರಾಬಾದ್ ನೀರಾವರಿ…

Read More