ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದು : ಅಣ್ಣಾ ಹಜಾರೆ

ಕೊಪ್ಪಳ,ಜ.೦೪: ದೇಶದ ಯುವಕರೇ ನಿಮ್ಮ ವೋಟನ್ನು ನೋಟಿಗೆ ಮಾರಿಕೊಳ್ಳಬೇಡಿ ನಿಷ್ಠಾವಂತರಿಗೆ ಮಾರಿಕೊಳ್ಳಿ. ದೇಶದ ಅಭಿವೃದ್ದಿಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಸಾಮಾಜಿಕ ಹೋರಾಟಗಾರ, ಪದ್ಮಭೂಷಣ ಅಣ್ಣಾ ಹಜಾರೆ ಹೇಳಿದರು. ಅವರು ನಗರದ ಸಾಹಿತ್ಯ ಭವನದಲ್ಲಿ ಇಂದು ಬೆಳಿಗ್ಗೆ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತ ದೇಶದ ಬೆನ್ನೆಲುಬು ರೈತ. ಈ ದೇಶದಲದಲ್ಲಿ ರೈತನ ಸ್ಥಿತಿ ತುಂಬಾ ಗಂಭೀರವಾಗಿದೆ. ಆದ್ದರಿಂದ ರೈತ ಬೆಳೆದ ಬೆಳೆಗೆ ೫೦ ರಷ್ಟು ಹೆಚ್ಚಿನ ಹಣ ಸಂದಾಯವಾಗಬೇಕು. ಅಂದಾಗಲೇ ರೈತರ ಬದುಕು ಉನ್ನತಗೊಳ್ಳಲಿಕ್ಕೆ ಸಾಧ್ಯ. ಅಂದಾಗ ಮಾತ್ರ ರೈತ ಸಾಲಬಾದೆ, ಆತ್ಮಹತ್ಯೆ ನಿಲ್ಲುತ್ತದೆ. ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಅಣ್ಣಾ ಹಜಾರೆಯ ಬೆಂಬಲಿಗರು ಆಗುದಕ್ಕಿಂತ ಸ್ವತ: ನೀವೇ ಅಣ್ಣಾ ಹಜಾರೆ ಆಗಿ ಎಂದು ಕರೆನೀಡಿದರು. ಈ ದೇಶ ಕಂಡ ಮಹಾನ್ ನಾಯಕರಲ್ಲಿ ನೀವು ಸೇರಿಕೊಳ್ಳುತ್ತೀರಿ. ನನ್ನ ಜೀವನದ ಸ್ಪೂರ್ತಿ ಸ್ವಾಮಿ ವಿವೇಕಾನಂದ ಹಾಗೂ ಮಹಾತ್ಮ…

Read More