ಟೈಗರ್ ಸಲ್ಮಾನ್ ಖಾನ್ : ದೇಶಭಕ್ತಿ ಮತ್ತು ಭಯೋತ್ಪಾದನೆ !

-ರಾಹುಲ ಬೆಳಗಲಿ ಸಲ್ಮಾನ್ ಖಾನ್ ಬಗ್ಗೆ ನನ್ನದೆ ಆದ ಕೆಲವಷ್ಟು ತಕರಾರುಗಳಿವೆ. ಇದು ಇತ್ತೀಚಿನದ್ದಲ್ಲ, ಕಾಲೇಜು ದಿನಗಳಿಂದಲೂ. ಗೆಳೆಯ ರವಿ ಜೊತೆ ಸಲ್ಮಾನ್ ವಿಷಯದಲ್ಲಿ ಅದೆಷ್ಟು ಜಗಳವಾಡಿದ್ದೇನೋ ಗೊತ್ತಿಲ್ಲ. ಶಾರುಖ್ ವಿಷಯದಲ್ಲಿ ಆತ ನನ್ನೊಂದಿಗೆ ಜಗಳವಾಡಿದ್ದು ಕಡಿಮೆಯೇನಿಲ್ಲ. ಆದರೆ ವರ್ಷಗಳ ಹಿಂದೆ ‘ಭಜರಂಗಿ ಭಾಯಜಾನ್’ ನೋಡಿದಾಗ ಮತ್ತು ವರ್ಷದ ಮೊದಲ ದಿನ “ಟೈಗರ್ ಜಿಂದಾ ಹೈ” ನೋಡಿದಾಗ, ಸಲ್ಮಾನ್ ಬಗ್ಗೆ ತಕರಾರಿನಲ್ಲಿ ಕೊಂಚ ರಿಯಾಯಿತಿಕೊಡಬೇಕು ಅನ್ನಿಸಿತು. ಹಾಗಂತ ಸಲ್ಮಾನಗೆ ನಾನು ಮನಸೋಇಚ್ಛೆ ಹೊಗಳುತ್ತಿಲ್ಲ. ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಸಲ್ಮಾನ್ ಬಗ್ಗೆ ಹಲವು ಆರೋಪಗಳಿವೆ. ಕ್ರಿಮಿನಲ್ ಪ್ರಕರಣಗಳೂ ಸಹ ಇವೆ. ಈ ಕಾರಣದಿಂದ ಆತನ ಬಗ್ಗೆ ಕೆಲವರು ಒಳ್ಳೆಯ ಅಭಿಪ್ರಾಯ ಹೊಂದಿಲ್ಲ. ಅದರ ಅರಿವು ನನಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿತ್ರಗಳ ಆಯ್ಕೆಗೆ ಸಂಬಂಧಿಸಿದಂತೆ ಆತನಲ್ಲಿ ಸೂಕ್ಷ್ಮ ಬದಲಾವಣೆ ಗಮನಿಸಿದ್ದೇನೆ. ವಿಶೇಷವಾಗಿ ಭಜರಂಗಿ ಮತ್ತು ಟೈಗರ್ ಜಿಂದಾ ಹೈ…

Read More