ಗವಿಮಠದ ಕೆರೆಯಲ್ಲಿ ತೆಪ್ಪೋತ್ಸವ :

ಕೊಪ್ಪಳ: ನಗರದ ಶ್ರೀ ಗವಿಮಠದ ಜಾತ್ರಾ iಹೋತ್ಸವದ ನಿಮಿತ್ಯ ಪ್ರತಿ ವರ್ಷವೂ ವೈಶಿಷ್ಟ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಿದ್ದು ಈ ವರ್ಷದ ಜಾತ್ರೆಯ ಮತ್ತೊಂದು ವೈಶಿಷ್ಠ್ಯವೇ ತೆಪ್ಪೋತ್ಸವ. ತೆಪ್ಪೊತ್ಸವ ಎಂದರೆ ಬಾವಿ, ಕೆರೆ, ನದಿಗಳಲ್ಲಿ ತೆಪ್ಪದ ಮೇಲೆ ನಡೆಯುವ ದೇವರ ಉತ್ಸವೆಂದು ಅರ್ಥ. ಎರಡು ತೆಪ್ಪಗಳ ನಡುವೆ ನಿರ್ಮಿಸಲಾದ ವೇದಿಕೆಯಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳವಾಧ್ಯಗಳೊಂದಿಗೆ ಕರೆ ತಂದು ಬಾಳೆ ಗಿಡ, ಹೂವಿನಿಂದ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಇರಿಸಿ ಮೂರ್ತಿಯನ್ನು ಹೊತ್ತ ತೆಪ್ಪವನ್ನು ನಾಲ್ಕು ದಿಕ್ಕುಗಳಲ್ಲಿನ ಅಂಬಿಗರು ಹುಟ್ಟು ಹಾಕಿ ಪುಷ್ಕರಣಿಯಲ್ಲಿ ಪ್ರದಕ್ಷಿಣೆ ಹಾಕಿಸುವ ಈ ತೆಪ್ಪೋತ್ಸವ ಹೈದ್ರಾಬಾದ್ ಕರ್ನಾಟಕದಲ್ಲಿಯೆ ಪ್ರಪ್ರಥಮ ಬಾರಿಗೆ ದಿ  ೩೧-೧೨-೨೦೧೭ರ ರವಿವಾರದಂದು ಶ್ರೀಮಠದ ಕೆರೆಯಲ್ಲಿ ಸಂಜೆ ೬:೦೦ ಗಂಟೆಗೆ ಜರುಗಲಿದೆ. ಆಗಮಿಸಿದ ಭಕ್ತರುಗವಿಸಿದ್ಧೇಶ್ವರ ಮಹಾರಾಜಕಿ ಜೈ, ಗವಿಸಿದ್ಧೇಶ್ವರ ಮಹಾರಾಜಕಿ ಜೈ, ಎಂದು ಶ್ರೀ ಗವಿಸಿದ್ಧೇಶ್ವರನಿಗೆ ಜಯಘೋಷಗಳನ್ನು ಕೂಗುತ್ತಾ ಧನ್ಯತಾ ಭಾವವನ್ನು ಅರ್ಪಿಸುವರು. ಈ…

Read More