ಸಂವಿಧಾನ ಬದಲಾಯಿಸಲು ಇವರು ಯಾರು? ರಾಯರಡ್ಡಿ ಪ್ರಶ್ನೆ

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಎಸ್ಸಿ,ಎಸ್ಟಿ ಜನಾಂಗದಲ್ಲಿ ಹುಟ್ಟಿದ್ದರೆ ಆ ನೋವು ಗೊತ್ತಾಗುತ್ತಿತ್ತು. ಮನುಷ್ಯನಿಗೆ ಹಣ, ಸೌಕರ್ಯ ಮುಖ್ಯ ಅಲ್ಲ. ಮರ್ಯಾದೆ ಮುಖ್ಯ. ಸಂವಿಧಾನ ಬದಲಾಯಿಸುತ್ತೇನೆ ಎನ್ನಲು ಇವರು ಯಾರು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಸಚಿವ ಬಸವರಾಜ್ ರಾಯರೆಡ್ಡಿ, ಅನಂತಕುಮಾರ್ ಹೆಗಡೆ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಸಂವಿಧಾನಕ್ಕೆ ಬದ್ದವಾಗಿರಬೇಕು. ಸಂವಿಧಾನಕ್ಕೆ ವಿರುದ್ಧವಾಗಿದ್ರೆ ಅವರು ಮಂತ್ರಿಯಾಗಲು ಅರ್ಹರಲ್ಲ. ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಲು ಇವರು ಯಾರು? ಇವರಿಗೆ ಪವರ್ ಇದೆಯಾ? ಸಂವಿಧಾನ ಬದಲಾಗಬೇಕಾದರೆ ಪಾರ್ಲಿಮೆಂಟ್‍ನಲ್ಲಿ 2/3 ಬಹುಮತದೊಂದಿಗೆ ಎಲ್ಲ ರಾಜ್ಯಗಳ ಒಪ್ಪಿಗೆ ಬೇಕು. ಸಂವಿಧಾವನ್ನು ಯಾಕೆ ಬದಲಾಯಿಸುತ್ತೇವೆ ಎಂದು ಹೇಳುತ್ತಾರೆ ಇವರು ಮೀಸಲಾತಿಯನ್ನು ಬೇಡ ಎನ್ನುವ ಮನಸ್ಥಿತಿಯವರು. ಎಲ್ಲಿಯವರೆಗೆ ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾಸ್ತಿಯಾಗಬೇಕು. ವಯಕ್ತಿಕವಾಗಿ ನಾನು ಮನುಸ್ಮøತಿ ವಿರೋಧಿ.…

Read More