ವಾಜಪೇಯಿ ಸಾರಥ್ಯದಲ್ಲಿ ಜಾಗತೀಕವಾಗಿ ಬೆಳದ ಭಾರತ: ಸಂಸದ ಸಂಗಣ್ಣ ಕರಡಿ

ಕೊಪ್ಪಳ, ಡಿ.೨೫: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ ದೇಶದ ಪ್ರತಿ ಗ್ರಾಮಗಳಿಗೆ ಸಂಪರ್ಕದ ವ್ಯವಸ್ಥೆ ಮತ್ತು ಆಗಿನ ಸಂದರ್ಭದಲ್ಲಿ ನದಿಗಳ ಜೋಡಣೆಯ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ದೀಮಂತ ನಾಯಕ ಮಾಜಿ ಪ್ರಧಾನಿ ವಾಜಪೇಯಿರವರು ಭಾರತ ಮತ್ತು ಪಾಕಿಸ್ತಾನ ದೇಶಗಳ ಸ್ನೇಹ ಸಂಬಂಧ ವೃದ್ಧಿಗಾಗಿ ಸಂಜೋತ ಬಸ್ ಸೇವೆ ಆರಂಭಿಸಿದರು. ಮತ್ತು ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರ ಕುಟುಂಬಗಳಿಗೆ ನೆರವು ನೀಡಲು ಪೆಟ್ರೋಲ್ ಬಂಕ್ ನೀಡುವ ಯೋಜನೆ ಜಾರಿ ಮಾಡಿದ ಕೀರ್ತಿ ಅಟಲ್ ಬಿಹಾರಿ ವಾಜಪೇಯಿರವರಿಗೆ ಸಲ್ಲುತ್ತದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು. ನಗರದ ಭಾಜಪ ಜಿಲ್ಲಾ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ೯೪ನೇ ಜನ್ಮದಿನವನ್ನು ಸುಶಾಸನ ದಿವನ್ನಾಗಿ ಆಚರಿಸುವ ಸಂದರ್ಭದಲ್ಲಿ ಮಾತನಾಡಿದ ಅವರು ಉತ್ತಮ ಸಂಸದಿಯ ಪಟುಗಳಾಗಿದ್ದ ಅವರು ಯಾರನ್ನು ಶತ್ರುಗಳಾಗಿ ನೋಡದೇ ಮಿತ್ರತ್ವವನ್ನು ಸಾಧಿಸಿ ಅಜಾತಶತ್ರುವಾಗಿದ್ದಾರೆ. ಅವರ…

Read More