ನಗರಕ್ಕೆ ಯುವ ಘಟಕದ ರಾಜ್ಯಾಧ್ಯಕ್ಷ ಎಸ್.ಮಧು ಬಂಗಾರಪ್ಪ ಆಗಮನ

ದಿನಾಂಕ:೨೦-೧೨-೨೦೧೭ ರ ಬುದವಾರದಂದು ಜೆ.ಡಿ.ಎಸ್ ಪಕ್ಷದ ಶಾಸಕರು ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ಎಸ್.ಮಧು ಬಂಗಾರಪ್ಪ ಆಗಮಸಲಿದ್ದು. ಜೊತೆಗೆ ವಿಧಾನಪರಿಷತ್ ಸದಸ್ಯರಾದ ಬಿ.ಎಮ್.ಎಲ್.ಕಾಂತರಾಜ್, ಜಿಲ್ಲಾ ವಿಕ್ಷಕರಾದ ಸಿ.ಎಮ್.ನಾಗರಾಜ, ಚಂದ್ರಶೇಖರ, ಟಿ.ಎನ್.ಹರೀಶಕುಮಾರ ಜಿಲ್ಲಾ ಅಧ್ಯಕ್ಷ ಪ್ರದೀಪ್‌ಗೌಡಾ ಮಾಲೀಪಾಟೀಲ, ರಾಜ್ಯಾಪ್ರಾಧಾನ ಕಾರ್ಯದರ್ಶಿ ಕೆ.ಎಮ್.ಸೈಯದ್, ವೀರೇಶ ಮಹಾಂತಯ್ಯನಮಠ, ಯುವ ಘಟಕದ ಜಿಲ್ಲಾದ್ಯಕ್ಷ ಕೆ.ಎಸ್.ಕೊಡತಗೇರಿ, ದೇವೇಗೌಡಾ ಪಟೇಲ್, ಹಾಗೂ ಪಕ್ಷದ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಅಂದು ಬೆಳಿಗ್ಗೆ ೧೧.೦೦ ಗಂಟೆಗೆ ಶ್ರೀ ಸಿರಸಪ್ಪಯ್ಯನಮಠದಲ್ಲಿ ಪೂಜೆಯನ್ನು ಸಲ್ಲಿಸಿ ಪಾದಯಾತ್ರೆಯ ಮೂಲಕ ಗಡಿಯಾರಕಂಬಾ, ಅಶೋಕ್ ಸರ್ಕಲ್ ಮಾರ್ಗವಾಗಿ ಪಕ್ಷದ ಕಾರ್ಯಾಯಕ್ಕೆ ತೆರಳಿ ನಂತರ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಜರುಗುವ ಜಿಲ್ಲಾ ಸಭೆಯಲ್ಲಿ ಪಾಲ್ಗೊಳ್ಳಿದ್ದು ಪಕ್ಷದ ಯುವಕರು ಈ ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಪಕ್ಷದ ಜಿಲ್ಲಾ ವಕ್ತಾರ ಮೌನೇಶ ಎಸ್.ವಡ್ಡಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Please follow and like us:

Read More