ಪರಿವರ್ತನಾ ಯಾತ್ರೆ ಯಶಸ್ಸಿನ ಶ್ರೇಯಸ್ಸು ಕಾರ್ಯಕರ್ತರಿಗೆ ಸಲ್ಲಬೇಕಾದದ್ದು- ಅಮರೇಶ ಕರಡಿ

ಕೊಪ್ಪಳ: ಇದೇ ಡಿ.೧೬ ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇತೃತ್ವದ ನವ ಕರ್ನಾಟಕಕ್ಕಾಗಿ ಪರಿವರ್ತನಾ ಯಾತ್ರೆಯು ನಗರಕ್ಕೆ ಆಗಮಿಸಿ ಅಮೋಘ ಯಶಸ್ಸು ಕಂಡಿದೆ. ಈ ಮಹತ್ವದ ಕಾರ್ಯಕ್ರಮ ಯಶಸ್ವಿಯಾಗಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾದ ಪಕ್ಷದ ಕಾರ್ಯಕರ್ತರು ಇದರ ಶ್ರೇಯಸ್ಸು ಅವರಿಗೆಸಲ್ಲಬೇಕಾದದ್ದು ಎಂದು ಬಿಜಪಿ ಮುಖಂಡ ಅಮರೇಶ ಕರಡಿ ಹೇಳಿದರು. ನಗರದ ಹೊಸಪೇಟೆ ರಸ್ತೆಯಲ್ಲಿ ಪರಿವರ್ತನೆ ಯಾತ್ರೆ ಸಭೆ ನಡೆದ ಸ್ಥಳದಲ್ಲಿ ಭಾನುವಾರ ಸ್ವಚ್ಚತಾ ಕಾರ್ಯ ಹಮ್ಮಿಕೊಂಡು ಬಳಿಕ ಅವರು ಮಾತನಾಡಿದರು. ಭಾರತೀಯ ಜನತಾ ಪಕ್ಷದ ಹಿರಿಯ-ಕಿರಿಯ ನಾಯಕರು, ಪಕ್ಷದ ಜೀವಾಳವಾದ ಕಾರ್ಯಕರ್ತರ ಸಹಕಾರದಿಂದ ಹಾಗೂ ಕೊಪ್ಪಳ ಕ್ಷೇತ್ರದ ಪ್ರಜ್ಞಾವಂತ ಜನಸಮೂಹದ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲದಿಂದ, ಪರಿವರ್ತನಾ ಯಾತ್ರೆ ಯಶಸ್ವಿಯಾಗಿದೆ. ಯಾತ್ರೆಯ ಯಶಸ್ಸಿಗೆ ಹಗಲು-ರಾತ್ರಿ ದುಡಿದ ಕ್ಷೇತ್ರದ ಕಾರ್ಯಕರ್ತರ ಕಾಳಜಿ ಕಾರಣವಾಗಿದೆ. ನಿಮ್ಮೆಲ್ಲರ ಜನಪರ ಸಹಕಾರ ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತಾ, ಕಾರ್ಯಕರ್ತರಿಗೆಲ್ಲ ನಿಮಗೆಲ್ಲ…

Read More