ಸ್ಪಿರಿಟ್ ಕರಾಟೆ ಅಕಾಡೆಮಿಯಿಂದ ಪರೀಕ್ಷೆ : ಬೆಲ್ಟ್ ವಿತರಣೆ

ಕೊಪ್ಪಳ : ಕೊಪ್ಪಳ ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆಯ ಆವರಣದಲ್ಲಿ ಸ್ಪಿರಿಟ್ ಕರಾಟೆ ಅಕಾಡೆಮಿಯಿಂದ ವಿದ್ಯಾರ್ಥಿಗಳಿಗೆ ಬೆಲ್ಟ್ ಪರೀಕ್ಷೆ ನಡೆಸಲಾಯಿತು. ವಿವಿಧ ವಿಭಾಗಗಳಲ್ಲಿ ಮಕ್ಕಳಿಗೆ ನಡೆದ ಬೆಲ್ಟ್ ಪರೀಕ್ಷೆಯಲ್ಲಿ 13 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಪರೀಕ್ಷಕರಾಗಿ ಎಚ್.ವಿ.ರಾಜಾಬಕ್ಷಿ , ಹಿರಿಯ ತರಬೇತುದಾರ ಮರಿಯಪ್ಪ ನಾಯಕ ಆಗಮಿಸಿದ್ದರು. ಅಕಾಡೆಮಿಯ ಸ್ವರಿತಾ ರೆಡ್ಡಿ ಮತ್ತು ಕೃಷ್ಣಾ ಅಂಗಡಿ ದ್ವಿಮುಂಬಡ್ತಿ ಪಡೆದರು. ಇದೇ ಸಂದರ್ಭದಲ್ಲಿ 13 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ವಿವಿಧ ಹಂತದ ಬೆಲ್ಟ್ ವಿತರಣೆ ಮಾಡಲಾಯಿತು. ಬೆಲ್ಟ್ ವಿತರಣಾ ಸಮಾರಂಭದಲ್ಲಿ ಶಾಲೆಯ ಉಪ ಪ್ರಾಂಶುಪಾಲ ವಿರೇಶ ಕೊಪ್ಪಳ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತರಬೇತುದಾರ ಪ್ರಭು ಗಾಳಿ ನಡೆಸಿಕೊಟ್ಟರು.

Read More