ಲೈಂಗಿಕ ದೌರ್ಜನ್ಯ ಪ್ರತಿರೋಧಿಸುವ ಮನೋಭಾವ ಬೆಳೆಸಿಕೊಳ್ಳಿ-ವಾಣಿ ಪೆರಿಯೋಡಿ

ಕೊಪ್ಪಳ : ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಯುತ್ತಲೇ ಇದೆ. ಮರ್ಯಾದೆಗಂಜಿ ಎಷ್ಟೋ ಜನ ಇದನ್ನು ಅನಿವಾರ್ಯ ಎನ್ನುವಂತೆ ಸಹಿಸಿಕೊಳ್ಳುತ್ತಾರೆ. ಲೈಂಗಿಕ ದೌರ್ಜನ್ಯಕ್ಕೊಳಗಾದವರೇ ಅಪರಾಧಿಗಳು ಎನ್ನುವಂತೆ ಸಮಾಜವೂ ಬಿಂಬಿಸುತ್ತೆ. ದೌರ್ಜನ್ಯ ಮಾಡಿದವರ ವಿರುದ್ದ ಮಾತನಾಡುವ ಬದಲಿಗೆ ಪೀಡಿತ, ಕಿರುಕುಳಕ್ಕೆ ಒಳಗಾದವರನ್ನೇ ಸಮಾಜ ಹೆದರಿಸಿ ಮರ್ಯಾದೆಯ ಹೆಸರಿನಲ್ಲಿ ಇಂತಹ ಪ್ರಕರಣಗಳನ್ನು ಮುಚ್ಚಿ ಹಾಕುತ್ತೆ. ಇಂತಹ ದೌರ್ಜನ್ಯದ ವಿರುದ್ದ ಪ್ರತಿಭಟಿಸುವ ಧ್ವನಿ ಎತ್ತುವ ಕೆಲಸವಾಗಬೇಕಿದೆ. ಅಂತಹ ಮನೋಭಾವನೆಯನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ಮಹಿಳಾ ಹೋರಾಟಗಾರ್ತಿ ವಾಣಿ ಪೆರಿಯೋಡಿ ಹೇಳಿದರು. ಅವರು ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ಜೀವಯಾನ ಬಳಗ ಕೊಪ್ಪಳವತಿಯಿಂದ ನಗರದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅರಿವಿನ ಪಯಣ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ದೌರ್ಜನ್ಯಕ್ಕೊಳಗಾದವರು ತಮ್ಮ ಆಪ್ತರೊಂದಿ, ಗೆಳೆಯ,ಗೆಳತಿಯರೊಂದಿಗಾದರೂ ಇದರ ಬಗ್ಗೆ ಹೇಳಿಕೊಳ್ಳಬೇಕು. ಮುಚ್ಚಿ ಹಾಕುವ ಪ್ರಯತ್ನ ಮಾಡಬಾರದು ಆಗಲಾದರೂ…

Read More