ಸಿಎಂ ಸಿದ್ದರಾಮಯ್ಯ ಒಬ್ಬ ಅಯೋಗ್ಯ,ಬೊಗಳೆದಾಸಯ್ಯ- ಯಡಿಯೂರಪ್ಪ

ಬರೀ ಸುಳ್ಳುಗಳನ್ನು ಹೇಳುತ್ತಾ ಬೊಗಳೆ ಬಿಡುತ್ತಿರುವ ಸಿಎಂ ಸಿದ್ದರಾಮಯ್ಯ ಒಬ್ಬ ಅಯೋಗ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜರಿದಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ನಾನು ಲಂಚತೆಗೆದುಕೊಂಡೋದನ್ನು ಅವರು ನೋಡಿದ್ದಾರಾ? ಅಥವಾ ನಾನು ಲಂಚ ತೆಗೆದುಕೊಂಡಿರುವ ಕುರಿತಂತೆ ಯಾವ ನ್ಯಾಯಾಲಯ ಹೇಳಿದೆ ಎಂದು ಪ್ರಶ್ನಿಸಿದ ಅವರು ನನ್ನ ಮೇಲೆ 42 ಕೇಸ್‍ಗಳಿವೆ ಎಂದು ಹೇಳುವ ಸಿದ್ದರಾಮಯ್ಯ ಅವುಗಳ ಪೈಕಿ 10 ಕೇಸ್‍ಗಳನ್ನಾದರೂ ಯಾವುವು ಹೇಳಲಿ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ಮೇಲೆ ಎಸಿಬಿಯಲ್ಲಿ 56 ದೂರುಗಳಿವೆ. ಆ ಕುರಿತಂತೆ ನಾನು ಬೇಕಾದರೆ ಪಟ್ಟಿಯನ್ನು ಕೊಡುತ್ತೇನೆ ಎಂದರು. ಸಿದ್ದರಾಮಯ್ಯ ಬಗ್ಗೆ ಅವರ ಪಕ್ಷದಲ್ಲೆ ಒಮ್ಮತವಿಲ್ಲ. ಅವರ ಪಕ್ಷದ ರಾಜ್ಯಾಧ್ಯಕ್ಷ ಏಕೆ ಬರುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಹೊನ್ನಾವರ ಸೇರಿದಂತೆ ರಾಜ್ಯದಲ್ಲಿ 20 ಜನ ಹಿಂದು ಯುವಕರ ಕೊಲೆಯಾಗಿದೆ. ಇದು ಸತ್ಯ ತಾನೆ…

Read More