ತುಂಗಭಧ್ರಾ ಹೆಚ್ಚುವರಿ ನೀರು ಬಿಡುಗಡೆಗೆ ತೆಲಂಗಾಣಕ್ಕೆ ನಿಯೋಗ

ಕೃಷ್ಣಾ ಬಿ. ಸ್ಕೀಂ; ಮೂರನೆ ಹಂತದ ಏತ ನೀರಾವರಿ ಯೋಜನೆಗೆ ಶೀಘ್ರ ಶಂಕುಸ್ಥಾಪನೆ : ಕೊಪ್ಪಳ ಜಿಲ್ಲೆಯ ರೈತರ ನೀರಿನ ಬವಣೆ ತಪ್ಪಿಸಲು ೨೩೯೬ ಕೋಟಿ ರೂ.ವೆಚ್ಚದಲ್ಲಿ ಕೃಷ್ಣಾ ನದಿಯ ಮೂರನೇ ಹಂತದ ನೀರು ಪೂರೈಕೆಗೆ ಜಿಲ್ಲೆಯ ಸಚಿವರ ಹಾಗೂ ಶಾಸಕರ ಆಗ್ರಹದಂತೆ ಶೀಘ್ರ ಏತ ನೀರವರಿ ಯೋಜನೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಆದಷ್ಟು ಬೇಗನೆ ಅದರ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸುವುದಾಗಿ ರಾಜ್ಯದ ಮುಖ್ಯಮಂತ್ರಿ   ಸಿದ್ದರಾಮಯ್ಯ ಭರವಸೆ ನೀಡಿದರು.  ಕನಕಗಿರಿಯ ಎ.ಪಿ.ಎಂ.ಸಿ ಆವರಣದಲ್ಲಿ ಕನಕಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದ ನುಡಿದಂತೆ ನಡೆದಿದ್ದೇವೆ ಸಾಧನಾ ಸಂಭ್ರಮದ ಜಿಲ್ಲಾ ಹಾಗೂ ತಾಲೂಕುಗಳ ಪ್ರಗತಿಮಾಹಿತಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಕಾರಟಗಿ ಮತ್ತು ಕನಕಗಿರಿ ನೂತನ ತಾಲೂಕುಗಳು ಬರುವ ಜನೇವರಿಯಿಂದ ಕಾರ್ಯ ನಿರ್ವಹಿಸಲಿವೆ…

Read More