ಮತದಾರರ ಪಟ್ಟಿ ಡಿ. 29 ಕೊನೆಯ ದಿನ : ಹೆಸರು ಸೇರಿಸಲು ಏನು ಮಾಡಬೇಕು ?

ಹೆಸರು ಸೇರಿಸಲು ಏನು ಮಾಡಬೇಕು ? ಮತದಾರರ ಪಟ್ಟಿಗೆ ಹೆಸರು ಸೇರಿಸಲು ಡಿ. 29 ರವರೆಗೆ ಅವಧಿ ವಿಸ್ತರಣೆ ಕೊಪ್ಪಳ ಡಿ. : ಕೊಪ್ಪಳ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಸಂಬಂಧಪಟ್ಟ ಮತದಾನ ಕೇಂದ್ರಗಳಲ್ಲಿ ಹಾಗೂ ತಹಶೀಲ್ದಾರ ಕಾರ್ಯಾಲಯದಲ್ಲಿ ಪ್ರಕಟಿಸಲಾಗಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಆಕ್ಷೇಪಣೆ ಸಲ್ಲಿಸಲು ಅವಧಿಯನ್ನು ನ. 30 ರಿಂದ ಡಿ. 29 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ. ಅರ್ಹತಾ ದಿನಾಂಕ 01-01-2018 ರ ಆಧಾರದ ಮೇಲೆ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದ ಸಲುವಾಗಿ ಈ ಹಿಂದೆ ಹೊರಡಿಸಲಾದ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗವು ರದ್ದುಗೊಳಿಸಿ, ಹೊಸದಾಗಿ ಕಾರ್ಯಕ್ರಮವ ವೇಳಾಪಟ್ಟಿಯನ್ನು ನೀಡಿದೆ.  ಆದ್ದರಿಂದ ಕೊಪ್ಪಳ ಜಿಲ್ಲೆಯ, 60-ಕುಷ್ಟಗಿ, 61-ಕನಕಗಿರಿ, 62-ಗಂಗಾವತಿ, 63-ಯಲಬುರ್ಗಾ ಮತ್ತು 64-ಕೊಪ್ಪಳ ವಿಧಾನಸಭಾ ಕ್ಷೇತ್ರಗಳಲ್ಲಿ…

Read More