ಶಾಸಕರು ರಸ್ತೆ ಹಗರಣದಲ್ಲಿ ಶಾಮೀಲಾದವರ ವಿರುದ್ದ ಕ್ರಮ ಜರುಗಿಸಲಿ- ಕಂದಾರಿ

ಕೊಪ್ಪಳ ನಗರದ ಮುಖ್ಯರಸ್ತೆ ಕಾಮಗಾರಿ ಕೇವಲ 4.5ಕೋಟಿ ಹಗರಣ ನಡೆದಿಲ್ಲ, ಬದಲಾಗಿ 40ಕೋಟಿ ಹಗರಣ ನಡೆದಿದ್ದು, ಈಗಾಗಲೇ ನಗರಾಭಿವೃದ್ದಿ ಇಲಾಖೆಯ ಅಧಿಕಾರಿಗಳ ತಂಡ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ 5ವರ್ಷಾವಾದರೂ ಯಾವುದೇ ಕ್ರಮ ಜರುಗಿಸಿಲ್ಲ. ಅಲ್ಲದೆ ನಾನು ಸಹ ಮುಖ್ಯಮಂತ್ರಿಗಳು ಸೇರಿದಂತೆ ಜಿಲ್ಲಾ ಉಸ್ತುವರಿ ಸಚಿವರಿಗೆ ಶಾಸಕರಿಗೆ ದೂರು ನೀಡಿ 8 ತಿಂಗಳು ಕಳೆಯುತ್ತಾ ಬಂದರೂ ಅದನ್ನು ತಿರುಗಿ ನೋಡದವರು ಈಗ ರಾಜಕೀಯ ಕಾರಣಕ್ಕಾಗಿ ತಪ್ಪಿತಸ್ಥರ ಕ್ರಮ ಜರುಗಿಸದೇ ದೂರು ಸಲ್ಲಿಸಿರುವ ಬಗ್ಗೆ ಸಮಾರಂಭದಲ್ಲಿ ಮಾತನಾಡಿರುವದು ಶಾಸಕರಿಗೆ ಶೋಭೆ ತರುವಂತದಲ್ಲ ಎಂದು ಹಾಲೇಶ ಕಂದಾರಿ ಹೇಳಿಕೆ ನೀಡಿದ್ದಾರೆ. ನಿನ್ನೆ 2 ನೇ ಭಾರಿ ಮುಖ್ಯರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಕಾಮಗಾರಿ ಪೂಜೆಯಲ್ಲಿ ಮಾತನಾಡಿರುವ ಕೊಪ್ಪಳದ ಶಾಸಕರಾದ ರಾಘವೇಂದ್ರ ಹಿಟ್ನಾಳರವರಿಗೆ ನಿಜಕ್ಕೂ ಸಾರ್ವಜನಿಕ ಹಣ ಪೋಲಾಗಿರುವ ಬಗ್ಗೆ ಕಾಳಜಿ ಇದ್ದರೆ, ಈಗಾಗಲೇ ತನಿಖಾ ತಂಡ ನೀಡಿರುವ…

Read More