ನ್ಯಾಯ ದೇವಿಯೆ, ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ?- ಡಾ. ಎಚ್. ಎಸ್. ಅನುಪಮಾ

ಬಹುಪಾಲು ಮಹಿಳಾಪರ ಸುಧಾರಣೆ-ಯೋಜನೆ-ಕಾನೂನುಗಳನ್ನು ರೂಪಿಸಿದವರು ತಾಯ್ತನದ ಮನಸಿನ ಪುರುಷರು. ಆದರೂ ವಿವಿಧ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಕೊಡುವ ತೀರ್ಪು-ಸಲಹೆಗಳಲ್ಲಿ; ವಕೀಲರ ವಾದ-ಪ್ರತಿವಾದ ಧೋರಣೆಗಳಲ್ಲಿ ಇಣುಕುವ ‘ಗಂಡು ಧೋರಣೆ ಕೆಲವೊಮ್ಮೆ ಚರ್ಚೆಗೆ ಬರುತ್ತದೆ. ತಾರತಮ್ಯ ರಹಿತವಾಗಿ ನ್ಯಾಯಾನ್ಯಾಯ ತೀರ್ಮಾನ ಮಾಡಬೇಕಾದ ನ್ಯಾಯಾಧೀಶರೇ ಪುರುಷ ಪಾರಮ್ಯ ಎತ್ತಿ ಹಿಡಿವಾಗ ಪ್ರಜ್ಞಾವಂತ ಮನಸುಗಳು ಬೆಚ್ಚಿಬಿದ್ದು ನ್ಯಾಯವ್ಯವಸ್ಥೆ ಮಹಿಳಾ ವಿರೋಧಿಯಾಗತೊಡಗಿದೆಯೆ ಎಂಬ ಚರ್ಚೆ ಶುರು ಮಾಡುತ್ತವೆ. ಪ್ರಾತಿನಿಧಿಕವಾಗಿ ನ್ಯಾಯವ್ಯವಸ್ಥೆಯಲ್ಲಿ ಕಡಿಮೆ ಸಂಖ್ಯೆಯ ದಲಿತರಿದ್ದಾರೆ. ಕಡಿಮೆ ಸಂಖ್ಯೆಯ ಆದಿವಾಸಿಗಳಿದ್ದಾರೆ. ಕಡಿಮೆ ಸಂಖ್ಯೆಯ ಹಳ್ಳಿಗರಿದ್ದಾರೆ. ಕಡಿಮೆ ಸಂಖ್ಯೆಯ ಅಲ್ಪಸಂಖ್ಯಾತ ಸಮುದಾಯದವರಿದ್ದಾರೆ. ಆದರೆ ಅಲ್ಲಿರುವ ಮಹಿಳೆಯರ ಸಂಖ್ಯೆ ಅವರ ಜನಸಂಖ್ಯೆಗನುಗುಣವಾಗಿ ತುಂಬ ಕಡಿಮೆಯಿದೆ. ಕಣ್ಣುಪಟ್ಟಿ ಕಟ್ಟಿ ತಕ್ಕಡಿ ಹಿಡಿದು ನಿಲಿಸಿದ ನ್ಯಾಯದೇವತೆಯ ಮಟ್ಟಿಗಷ್ಟೇ ಮಹಿಳಾ ಭಾಗವಹಿಸುವಿಕೆ ಮುಗಿದು ಹೋಗುತ್ತಿದೆಯೇ ಎಂದು ಆತಂಕ ಹುಟ್ಟಿಸುವಂತೆ ವಾಸ್ತವವಿದೆ. ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಫಾತಿಮಾ ಬೀವಿ ಅಥವಾ ಸುಜಾತಾ ಮನೋಹರ್ ಇರಲಿ;…

Read More