ಜಿಲ್ಲೆಯ ೧.೬೩ ಲಕ್ಷ ಫಲಾನುಭವಿಗಳಿಗೆ ಮಾರ್ಚ್ ಒಳಗಾಗಿ ಉಚಿತ ಅನಿಲ ಸಂಪರ್ಕ- ಬಸವರಾಜ ರಾಯರಡ್ಡಿ

: ಜಿಲ್ಲೆಯಲ್ಲಿನ ಬಿಪಿಎಲ್/ಅಂತ್ಯೋದಯ ಅನಿಲ ರಹಿತ ಪಡಿತರ ಚೀಟಿ ಹೊಂದಿರುವ ೧. ೬೩ ಲಕ್ಷ ಕುಟುಂಬಗಳಿಗೆ ೨೦೧೮ ರ ಮಾರ್ಚ್ ಒಳಗಾಗಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಎಲ್‌ಪಿಜಿ ಅನಿಲ ಸಿಲಿಂಡರ್ ಸಂಪರ್ಕ ಒದಗಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.  ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ಕಲ್ಪಿಸುವ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರವು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಅನಿಲ ಸಂಪರ್ಕ ಜೊತೆಗೆ ಎರಡು ಗ್ಯಾಸ್ ಬರ್ನರ್ ಸ್ಟೌವ್ ಮತ್ತು ಎರಡು ಭರ್ತಿ ಮಾಡಿದ ಸಿಲಿಂಡರ್‌ಅನ್ನು ಸಂಪೂರ್ಣ ಉಚಿತವಾಗಿ ನೀಡಲಿದೆ.  ಇದಕ್ಕಾಗಿ ಪ್ರತಿ…

Read More