ಗೋರಂಟ್ಲಿಯವರಿಗೆ ಸಿಕ್ಕ ಪ್ರಶಸ್ತಿ ಸ್ನೇಹ ಬಳಗಕ್ಕೆ ಸಂದ ಗೌರವ- ಬೆಟ್ಟದೂರ

ಕೊಪ್ಪಳ : ನಿರಂತರವಾದ ಹೋರಾಟಗಳ ಮೂಲಕ ಕೊಪ್ಪಳ ಜಿಲ್ಲೆಯು ರಾಜ್ಯಾದ್ಯಂತ ಹೆಸರು ಮಾಡಿದೆ. ಗೋಕಾಕ ಚಳುವಳಿ, ಕುದ್ರಿಮೋತಿ ಹೋರಾಟ, ಜಿಲ್ಲಾ ಹೋರಾಟಗಳು, ಕಾರ್ಮಿಕ ಹೋರಾಟ ಹೀಗೆ ಸತತ ಹೋರಾಟಗಳಲ್ಲಿ ನಮ್ಮ ಜಿಲ್ಲೆಯ ಎಲ್ಲಾ ಪ್ರಗತಿಪರ ಮನಸ್ಸುಗಳು ಒಂದಾಗಿ ಹೋರಾಟ ಮಾಡಿವೆ. ಈ ಎಲ್ಲಾ ಹೋರಾಟಗಳಲ್ಲಿ ವಿಠ್ಠಪ್ಪ ಗೋರಂಟ್ಲಿಯವರೂ ಪ್ರಮುಖ ಪಾತ್ರವಹಿಸಿದ್ದಾರೆ. ಕೇವಲ ಹೋರಾಟಗಳು ಮಾತ್ರವಲ್ಲ ಸಾಹಿತ್ಯ, ಮಾದ್ಯಮ ಕ್ಷೇತ್ರಗಳಲ್ಲಿಯೂ ಗೋರಂಟ್ಲಿಯವರು ತಮ್ಮದೇ ಛಾಪು ಮೂಡಿಸಿದ್ದಾರೆ.  ಹೀಗಾಗಿ ಗೋರಂಟ್ಲಿಯವರಿಗೆ ಸಿಕ್ಕ ಪ್ರಶಸ್ತಿ ಇಡೀ ಸ್ನೇಹ ಬಳಗಕ್ಕೆ ಸಂದ ಗೌರವಾಗಿದೆ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಹೇಳಿದರು. ನಗರದ ಸರಕಾರಿ ನೌಕರರ ಭವನದಲ್ಲಿ ನಡೆದ ಕನ್ನಡನೆಟ್ ಡಾಟ್ ಕಾಂ ಕವಿಸಮೂಹದ ೧೯೦ನೇ ಕವಿಸಮಯ ಕಾರ‍್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಕವಿಸಮೂಹ ಬಳಗದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಠ್ಠಪ್ಪ ಗೋರಂಟ್ಲಿಯವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಹಲವಾರು ಭಿನ್ನಾಭಿಪ್ರಾಯಗಳ ನಡುವೆಯೂ ನಾವೆಲ್ಲಾ ಒಂದಾಗಿ…

Read More