ಅಬುಧಾಬಿ ಕರ್ನಾಟಕ ಸಂಘದ ಆದ್ಧೂರಿ ೬೨ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ

ಡಾ| ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ,   ಶೇಖರ್ ದಾಮೋದರ ಶೆಟ್ಟಿಗಾರ್ ಕಿನ್ನಿಗೋಳಿಯವರಿಗೆ  ಡಾ| ದ. ರಾ. ಬೇಂದ್ರೆ ಪ್ರಶಸ್ತಿ ಪ್ರಧಾನ ಅಬುಧಾಬಿಯಲ್ಲಿರುವ ಇಂಡಿಯಾ ಸೋಶಿಯಲ್ ಸೆಂಟರ್ ಆಶ್ರಯದಲ್ಲಿ ನಡೆಸಲಾಗುವ ಪ್ರಾದೇಶಿಕ ಸಮಾರಂಭ ೬೨ನೇ ಕರ್ನಾಟಕ ರಾಜ್ಯೋತ್ಸವ ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ೨೦೧೭ ನವೆಂಬರ್ ೩ನೇ ತಾರೀಕು ಶುಕ್ರವಾರ ಬೆಳಿಗ್ಗೆ ೧೦.೩೦ಕ್ಕೆ ಅಬುಧಾಬಿಯಲ್ಲಿರುವ ಇಂಡಿಯಾ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ಸರ್ವರ ಮನಸೆಳೆಯಿತು. ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ ಸಮಾರಂಭದ ಉದ್ಘಾಟನೆಯನ್ನು ಯು.ಎ.ಇ. ಕನ್ನಡಿಗರ ಮಹಾಪೋಷಕರಾದ ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರು ಇಂಡಿಯಾ ಸೋಶಿಯಲ್ ಸೆಂಟರ್‌ನ ಅಧ್ಯಕ್ಷರು   ಜಯಚಂದ್ರ ನಾಯರ್ ಮತ್ತು ಪ್ರಧಾನ ಕಾರ್ಯದರ್ಶಿ   ಎಂ. ಎ. ಸಲಾಂ ಹಾಗೂ ಅತಿಥಿಯಾಗಿ ಆಗಮಿಸಿದ್ದ ಶಾಯರಿ ಸಾಮ್ರಾಟ್ ಅಸಾದುಲ್ಲಾ ಬೇಗ್ ರವರ ಸಮ್ಮುಖದಲ್ಲಿ ಉದ್ಘಾಟಿಸಿದರು. ಅಧ್ಯಕ್ಷರಾದ …

Read More