ಟಿಪ್ಪು ಬಗ್ಗೆ ಅಪಸ್ವರ ಯಾಕೆ?- ಸಿಎಂ ಸಿದ್ಧರಾಮಯ್ಯ

ಬಳ್ಳಾರಿ,ನ.3-ಬ್ರಿಟೀಷರ ವಿರುದ್ಧ ಮೈಸೂರು 3ನೇ ಯುದ್ಧದಲ್ಲಿ ಸೆಣಸಾಡಿ ಸೋತಾಗ ಟಿಪ್ಪುವಿಗೆ ಬ್ರಿಟೀಷರು ಯುದ್ಧದ ಹಾನಿಯನ್ನು ಭರಿಸುವಂತೆ ಒತ್ತಾಯಿಸಿದ್ದರು. ಆಗ ಟಿಪ್ಪು ಸುಲ್ತಾನ್ ತನ್ನ ಇಬ್ಬರು ಮಕ್ಕಳನ್ನೇ ಒತ್ತೆ ಇಟ್ಟು ನಾಡ ಪ್ರೇಮ ಮೆರೆದಿದ್ದಾನೆ. ಇಂತಹ ಹೋರಾಟಗಾರರು ಯಾರಾದರೂ ಇತಿಹಾಸದಲ್ಲಿ ಇದ್ದಾರೆಯೇ? ಮತ್ತೆ ಯಾಕೆ ಟಿಪ್ಪು ಸುಲ್ತಾನ್ ಬಗ್ಗೆ ಟೀಕೆ ಮಾಡುತ್ತೀರಿ? ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರ ಕಾಲೆಳೆದರು. ಹಂಪಿಯ ಎದುರು ಬಸವಣ್ಣ ವೇದಿಕೆ(ಎಂ.ಪಿ.ಪ್ರಕಾಶ್)ಯ ಹಂಪಿ ಉತ್ಸವ-2017 ಉದ್ಘಾಟಿಸಿ ಮಾತನಾಡಿದ ಅವರು, ವಿಜಯ ನಗರ ಸಾಮ್ರಾಜ್ಯದ ಕೊನೆಯ ಅರಸು ಶ್ರೀ ಕೃಷ್ಣದೇವರಾಯ ಸಾಮಾಜಿಕ ಒಕ್ಕೂಟ ವ್ಯವಸ್ಥೆಗೆ ಸಾಕಷ್ಟು ಒತ್ತು ನೀಡಿದ್ದರು. ಅವರ ಸೈನ್ಯದಲ್ಲಿ ಬಹುತೇಕರು ಮುಸ್ಲಿಮರೇ ಇದ್ದರು. ಟಿಪ್ಪು ಸುಲ್ತಾನ್ ಕೂಡ ಶೃಂಗೇರಿ ಮಠ, ನಂಜನಗೂಡು ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ದಿವಾನ್ ಆಗಿ ಪೂರ್ಣಯ್ಯ ಇದ್ದರು. ಕನ್ನಡ ಭಾಷೆ, ಕನ್ನಡ…

Read More