ನ. ೧೯ ರಂದು ಕೊಪ್ಪಳದಲ್ಲಿ ಲಿಂಗಾಯತ ಸಮಾವೇಶನ.

೧೯ ರಂದು ಕೊಪ್ಪಳದಲ್ಲಿ ಲಿಂಗಾಯತ ಸಮಾವೇಶ ೧೯ನೇ ನವ್ಹಂಬರ ೨೦೧೭ ರಂದು ಕೊಪ್ಪಳ ನಗರದಲ್ಲಿ ಲಿಂಗಾಯತ ಸಮಾವೇಶ ನಡೆಯಲಿದೆ ಎಂದು ಸಮಾವೇಶದ ಸಂಚಾಲಕರಲ್ಲಿ ಒಬ್ಬರಾದ ಬಸವರಾಜ ಬಳ್ಳೊಳ್ಳಿ ತಿಳಿಸಿದ್ದಾರೆ.  ದಿನಾಂಕ: ೦೭/೧೦/೨೦೧೭ ರಂದು ನಗರದ ಶಿವಶಾಂತ ಮಂಗಲ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕುಷ್ಟಗಿ, ಗಂಗಾವತಿ, ಯಲಬುರ್ಗಾ ಎಲ್ಲಾ ಮುಖಂಡರು ಪಾಲ್ಗೊಂಡು ಸಭೆಯಲ್ಲಿ ಕೆಳಕಂಡ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.೧) ಬಸವರಾಜ ಬಳ್ಳೊಳ್ಳಿಯವರನ್ನು ಜಿಲ್ಲಾ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.೨) ಕೊಪ್ಪಳ ಜಿಲ್ಲೆಯ ಎಲ್ಲಾ ಲಿಂಗಾಯತ ಧರ್ಮದ ಉಪಪಗಂಡಗಳ ಸಮಾಜದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಂಚಾಲಕ ಸಮಿತಿ ಸದಸ್ಯರುಗಳಾಗಿರುತ್ತಾರೆ.  ಸಭೆಯಲ್ಲಿ ಕುಷ್ಟಗಿ ಮಾಜಿ ಶಾಸಕರಾದ ಕೆ.ಶರಣಪ್ಪ. ಗಂಗಾವತಿಯ ಸಿ.ಎಚ್.ನಾರಿನಾಳ.ಯಲಬುರ್ಗಾದ ಮಂಜುನಾಥ ಸೋರಟೂರು. ಲಿಂಗಾಯತ ಮಹಾಸಭೆಯ ತಾಲೂಕ ಅಧ್ಯಕ್ಷ ಗುರುರಾಜ ಹಲಗೇರಿ, ಮಲ್ಲಪ್ಪ ಕವಲೂರ, ಕೃಷ್ಣ ಕಟ್ಟಿಮನಿ, ವಿರುಪಾಕ್ಷಪ್ಪ ಮರಳಿ, ಭೀಮಣ್ಣ ಹೂಗಾರ, ಡಾ ಬಸಯ್ಯ ಸಸಿಮಠ, ಅಲ್ಲಮಪ್ರಭು ಬೆಟ್ಟದೂರು, ಮಂಜುನಾಥ ಹಂದ್ರಾಳ,…

Read More