ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ

: ಕೊಪ್ಪಳ ಜಿಲ್ಲಾ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಇಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್  ‍ ನೇತೃತ್ವದಲ್ಲಿ ಜಿಲ್ಲಾ ಪಂಚಾಯತಿಯ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಇಳಿದರು. ಇಂದು ಕುಷ್ಟಗಿ ತಾಲೂಕಿನ ಹಲವೆಡೆ ಭೀಕರ ಬರ ಬಿದ್ದಿದೆ, ಜನ ಜಾನುವಾರಗಳಿಗೆ ಕುಡಿಯಲು ನೀರಿಲ್ಲ, ಮೇವಿನ ಕೋರತೆ ಎಲ್ಲಡೆ ಇದೆ. ಇದ್ದಂತಹ ಗೋಶಾಲೆಗಳನ್ನು ಮುಚ್ಚಲಾಗಿದೆ ಮೋದಲು ಇದಕ್ಕೋಂದು ಪರಿಹಾರ ಸೂಚಿಸಿ ಬಳಿಕ ಸಭೆ ಆರಂಭಿಸಿ ಎಂದು ಪ್ರತಿಭಟನೆಗೆ ಮುಂದಾಗಿ ಸಭಾಂಗಣದಲ್ಲಿಯೇ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಹೀಗೆ ಪ್ರತಿಭಟನೆ ಮಾಡುವದರಿಂದ ಇನ್ನುಳಿದ ಪ್ರಗತಿ ಕಾಮಗಾರಿಗಳ ಕುರಿತು ಚರ್ಚೆ ಮಾಡಲಾಗುವದಿಲ್ಲ ಹೀಗಾಗಿ ಪ್ರತಿಭಟನೆಯ ಹಾದಿಯನ್ನು ಕೈ ಬಿಡಿ ಎಂದು ಜಿಲ್ಲಾ ಪಂಚಾಯತಿಯ ಅದ್ಯಕ್ಷ ರಾಜಶೇಖರ್ ಹಿಟ್ನಾಳ್ ಮನವಿ ಮಾಡಿಕೋಂಡರು. ಇದಕ್ಕೂ ಜಗ್ಗದ ಪ್ರತಿಭಟನಾಕಾರರು ಹಾಗೆ ಪ್ರತಿಭಟನೆಯನ್ನು ಮುಂದೆ ವರೆಸಿದರು. ಬಳಿಕ ಸಭೆಯನ್ನು ಮೊಟಕುಗೋಳಿಸಿ ಜಿಲ್ಲಾ ಪಂಚಾಯತಿಯ ಅದ್ಯಕ್ಷ…

Read More