ಸಂಸ್ಥೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು- ಬಿ.ಎಸ್​​​.ಗದ್ದಿಕೇರಿ

  ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಪ್ರತಿಯೊಬ್ಬ ನೌಕರರು ಸಂಸ್ಥೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂದು ಈಶಾನ್ಯ ಕರ್ನಾಟಕ ಸಾರಿಗೆ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್​.ಗದ್ದಿಕೇರಿ ಹೇಳಿದರು. ನಗರದ ವಿಭಾಗೀಯ ಕಚೇರಿಯಲ್ಲಿ ನಡೆದ ಸಹಾಯಕ ಸಂಚಾರ ನಿರಿಕ್ಷಕ ಚಂದಾಲಿಂಗಪ್ಪ ಯಲಿಗಾರ್​ ಅವರ ವಯೋ ನಿವೃತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇನ್ನು ಸಾರಿಗೆ ಸಂಸ್ಥೆಯಲ್ಲಿ 35 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಚಂದಾಲಿಂಗಪ್ಪ ಯಲಿಗಾರ್​ ಇದೀಗ ನಿವೃತ್ತಿಯಾಗುತ್ತಿದ್ದಾರೆ. ಇದರಿಂದಾಗಿ ಪ್ರಮಾಣಿಕ ನೌಕರರೊಬ್ಬರು ಇಂದು ಸಂಸ್ಥೆಯಿಂದ ಹೊರಗೆ ಹೋಗುತ್ತಿದ್ದಾರೆ. ಇನ್ನು ಚಂದಾಲಿಂಗಪ್ಪ ಯಲಿಗಾರ್​ ಅವರು ಸಂಸ್ಥೆಯಲ್ಲಿ ಸೇವೆ ಸಲ್ಲಿಸುವವರೆಗೂ ಯಾವುದೆ ಒಂದೇ ಒಂದು ಕಪ್ಪುಚುಕ್ಕೆ ಇರಲಾರದ ರೀತಿ ಕೆಲಸ ಮಾಡಿದ್ದಾರೆ. ಚಂದಾಲಿಂಗಪ್ಪ ಅವರ ಕಾಯಕ ನಿಷ್ಠೆ ಹಾಗೂ ವೃತ್ತಿಯ ಬಗ್ಗೆ ಇರುವ ಗೌರವ ಇಲಾಖೆಯ ಇತರ ನೌಕರರಿಗೆ ಮಾದರಿಯಾಗಿದೆ ಎಂದರು. ಇನ್ನು ನಿವೃತ್ತಿ ಬಳಿಕ ನೌಕರರು…

Read More