ಸಿಕ್ಕಿದ್ರೆ ಶಿಕಾರಿ, ಇಲ್ದಿದ್ರೆ ಭಿಕಾರಿ :

  ಹೆಸರು ಕೇಳಿ ಮಾತ್ರ ಗೊತ್ತಿದ್ದ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋನಲ್ಲಿ, ಶತದಿನೋತ್ಸವ-ಆರು ತಿಂಗಳು-ಒಂದು ವರ್ಷ ಓಡಿದ ಸಿನಿಮಾ ಫಲಕಗಳ ನಡುವೆ ಕುಳಿತು ಒಂದು ಸಾಕ್ಷ್ಯ ಚಿತ್ರ ನೋಡಿದೆವು. ಯಾರ ಕುರಿತು ನಾವು ಕಣ್ಣಿದ್ದೂ ಕುರುಡರಾಗಿದ್ದೇವೋ, ಕಿವಿಯಿದ್ದೂ ಕಿವುಡರಾಗಿದ್ದೇವೋ ಅಂತಹವರ ಕುರಿತ ಚಿತ್ರವದು. ಕಳೆದ ೨೫ ವರ್ಷಗಳಿಂದ ಹಕ್ಕಿಪಿಕ್ಕಿ ಸಮುದಾಯದೊಡನೆ, ಮಹಿಳಾ ಸಂಘಟನೆಗಳೊಡನೆ ಎಲೆಯ ಮರೆಯ ಕಾಯಂತೆ ಕೆಲಸ ಮಾಡುತ್ತಿರುವ ಅಂತಃಕರಣದ ಗೆಳತಿ ಮಧು ಭೂಷಣ್ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯಗಳ ಬದುಕನ್ನು ಸಾಕ್ಷ್ಯಚಿತ್ರಗಳಾಗಿ ಸೆರೆ ಹಿಡಿಯುವ ಸಮರ್ಥ ನಿರ್ದೇಶಕ ವಿನೋದ್ ರಾಜಾ – ಇವರಿಬ್ಬರ ಬದ್ಧತೆಯಿಂದ ಹಕ್ಕಿಪಿಕ್ಕಿ ಎಂಬ ಅರೆ ಅಲೆಮಾರಿ ಸಮುದಾಯ ಕುರಿತ ಸಾಕ್ಷ್ಯಚಿತ್ರ ‘ಸಿಕ್ಕಿದ್ರೆ ಶಿಕಾರಿ, ಇಲ್ದಿದ್ರೆ ಭಿಕಾರಿ’ ರೂಪುಗೊಂಡಿದೆ. ಈ ಚಿತ್ರದ ಇನ್ನೊಂದು ವಿಶೇಷ ಅದೇ ಸಮುದಾಯದವರಾಗಿ ಶಿಕ್ಷಣ ಪಡೆದು ಈಗ ಜೋಗದಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿರುವ ಕುಮುದಾ ಅವರ ಭಾಗವಹಿಸುವಿಕೆ.…

Read More