ಮೋದಿ, ಅಮಿತಾಬ್ & ಕ್ಷೌರಿಕ

VIfun-imageP ಮತ್ತು VVIP
ಗಳಿಗೆ ಹೇರ್ ಕಟಿಂಗ್ ಮಾಡುತ್ತಿದ್ದ ಕ್ಷೌರಿಕ…
ಕ್ಷೌರ ಮಾಡುತ್ತಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೇಳಿದ… .
” ಸಾರ್, ಈ ಸ್ವಿಸ್ ಬ್ಯಾಂಕ್ ಅಕೌಂಟ್ ಅಂತಾರಲ್ಲ..ಅದೇನು..ಅದಾನಿ ಅಣ್ಣನ ಹೆಸ್ರಲ್ಲಿ ಕಪ್ಪು ನೋಟ್ ಉಂಟಂತೇ ಹೌದಾ?”
ಮೋದಿ:- ಏ.. ನೀನು ಕಟಿಂಗ್ ಮಾಡುತ್ತೀಯಾ ಅಥವಾ ನನ್ನ enquiry ಮಾಡ್ತೀಯಾ…
:- ಕ್ಷಮಿಸಿ.. ಸಾರ್ ನಾನು ಸುಮ್ಮನೆ ಕೇಳಿದೆ..
ಮಾರನೇ ದಿನ..
ಅಮಿತಾಬ್ ಬಚ್ಚನ್ರಿಗೆ
ಕಟಿಂಗ್ ಮಾಡುತ್ತಾ ಕೇಳಿದ
ಕ್ಷೌರಿಕ:- ಸಾರ್.. ಈ ಕಪ್ಪು ಹಣ ಅಂದ್ರೆ ಏನ್ಸಾರ್… ಮೋದಿನ ಕೇಳಿದ್ರೆ ಬೈದ್ ಬಿಟ್ರು?
ಅಮಿತಾಬ್ :- (ಸಿಟ್ಟಿನಿಂದ) ಇದನ್ನೆಲ್ಲ ನನಗ್ಯಾಕೆ ಕೇಳ್ತೀಯಾ.?
ಕ್ಷೌರಿಕ:- ಕ್ಷಮಿಸಿ… ಸಾರ್.. ಸುಮ್ಮನೆ ಕೇಳ್ದೆ..
ಬೆಳಿಗ್ಗೆ CBI ನವರು ಬಂದು ಕ್ಷೌರಿಕನನ್ನು ಎತ್ತಾಕೊಂಡು ಹೋಗಿ ವಿಚಾರಣೆ ಶುರು ಮಾಡಿದ್ರು….
CBI- ನೀನು.. ಯಾರು.. ಅರವಿಂದ್ ಕೇಜ್ರಿವಾಲ್ ಏಜೆಂಟಾ…?
ಅಥವಾ ಕಾಂಗ್ರೆಸ್ ಪಕ್ಷದ ಡಿಟೆಕ್ಟಿವಾ?
ಹೇಳು ಅಂತ ಗದರಿದರು…
ಕ್ಷೌರಿಕ ಹೆದರುತ್ತಾ ನಿಧಾನವಾಗಿ ಹೇಳಿದ..
” ಸ್ವಾಮಿ.. ನನಗೇನು ಗೊತ್ತಿಲ್ಲ.. ಆದ್ರೆ ಈ ಕಪ್ಪು ಹಣ ಮತ್ತು ಸ್ವಿಸ್ ಬ್ಯಾಂಕ್ ಅಂದಾಕ್ಷಣ ಅವರ ಕೂದಲು ನೆಟ್ಟಗೆ ನಿಂತುಕೊಳ್ಳುತ್ತಾ ಇತ್ತು..
ಆಗ ನನಗೆ ಕಟಿಂಗ್ ಮಾಡೋಕೆ ಸುಲಭ ಆಗ್ತಾ ಇತ್ತು… ಅದಕ್ಕೆ ಕೇಳ್ತಾ ಇದ್ದೆ.. ” ಅಂದ….

Please follow and like us:
error