ವಿದ್ಯಾರ್ಥಿಗಳಿಗೆ ಚಿತ್ರರಂಗದಲ್ಲಿ ಅವಕಾಶ ಕಲ್ಪಿಸುವುದೆ ನಮ್ಮ ಗುರಿ

ಕೋಳೂರು ರಂಗನಾಥ
ಕೊಪ್ಪಳ : ಪೃಥ್ವಿ ಫಿಲಂ ಮತ್ತು ಟ.ವಿ ಇನ್ಸ್ಟಿಟ್ಯೂಟ್ ನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉತ್ತಮ ನಟನಾ ತರಬೇತಿಯನ್ನು ನೀಡುವುದರ ಮೂಲಕ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಪ್ರಥಮ ಗುರಿಯಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಕೋಳೂರು ರಂಗನಾಥ ಹೇಳಿದರು.
ಅವರು ಡಿ.20 ರಂದು ನಗರದ ಪೃಥ್ವಿ ಫಿಲಂ ಮತ್ತು ಟಿ.ವಿ ಇನ್ಸ್ಟಿಟ್ಯೂಟ್ ಹಮ್ಮಿಕೊಂಡಿದ್ದ ಚಲನಚಿತ್ರ ಅಭಿನಯ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಿನಿಮಾ ನಟನೆ ತರಬೇತಿಗಾಗಿ ಒಂದು ವೇದಿಕೆ ಸಿದ್ಧವಾಗಿದೆ ತರಬೇತಿ ನೀಡಲು ನುರಿತ ರಂಗ ಕರ್ಮಿಗಳು ಮತ್ತು ಚಿತ್ರರಂಗದ ಪ್ರಸಿದ್ಧ ನಿರ್ದೇಶಕ-ನಟ-ನಟಿಯರು ನಮ್ಮೊಂದಿಗೆ ಇದ್ದಾರೆ. ಇದರ ಜೊತೆ ಕ್ಯಾಂಪಸ್ ಸಿಲೆಕ್ಷನ್ ರೀತಿಯಲ್ಲಿ ಪ್ರೊಡಕ್ಷನ್ ಕಂಪೆನಿಗಳನ್ನು ಸಂಪರ್ಕಿಸಿ ಕಲಾವಿದರ ಆಯ್ಕೆಗೆ ಸಹಕಾರ ನೀಡಲಾಗುವುದು. ಆಸಕ್ತರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಎರಡನೆಯ ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿದ
ಎನ್. ಎಸ್. ಡಿ ಪದವಿಧರೆ ಸಹನಾ ಪಿ. ಅವರು ಮಾತನಾಡಿ ನಟನಾದವನಿಗೆ ನಂಬಿಕೆ ಮತ್ತು ಉದ್ದೇಶಗಳಿರಬೇಕು ತಾನು ನಿರ್ವಹಿಸುವ ಯಾವ ಪಾತ್ರವಾದರು ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವುದರೊಂದಿಗೆ ಆ ಪಾತ್ರವನ್ನು ನಂಬಬೇಕು. ನಟ ನಾನು ಯಾವ ಉದ್ದೇಶಕ್ಕಾಗಿ ಈ ಪಾತ್ರ ಮಾಡುತ್ತಿದ್ದೇನೆ ಮತ್ತು ಪಾತ್ರದ ಉದ್ದೇಶ ಏನು ಎಂಬುದನ್ನು ತಿಳಿದುಕೊಂಡಾಗ ಮಾತ್ರ ಅವನು ಉತ್ತಮ ನಟನಾಗಬಲ್ಲನು ಎಂದರು.
ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ಪಟಾಕಿ ಬಸವರಾಜ, ಸಂಪನ್ಮೂಲ ವ್ಯಕ್ತಿ ರಂಗಭೂಮಿ ಮತ್ತು ಸಿನಿಮಾ ಕಲಾವಿದ ಜಿ.ದೇವರಾಜ್ ಪ್ರಭು ಬೆಂಗಳೂರು, ಮಂಜುನಾಥ ಗೊಂಡಬಾಳ, ಡಾ.ಬಸವರಾಜ ಬಣ್ಣದಬಾವಿ ಸೇರಿದಂತೆ ಇತರರು ಉಪಸ್ಥಿತಿರಿದ್ದರು.

Please follow and like us:
error