ಖ್ಯಾತ ಬಾಲಿವುಡ್ ನಟ ರಿಷಿ ಕಪೂರ್ ನಿಧನ

ಮುಂಬೈ , ಎ . 30 : ಖ್ಯಾತ ಬಾಲಿವುಡ್ ನಟ ರಿಷಿ ಕಪೂರ್ ಗುರುವಾರ ಬೆಳಗ್ಗೆ ಮುಂಬೈಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ . ಅವರಿಗೆ 67 ವರ್ಷ ವಯಸ್ಸಾಗಿತ್ತು . ನಟ , ನಿರ್ದೇಶಕ ಹಾಗೂ ಸಿನೆಮಾ ನಿರ್ಮಾಪಕರಾಗಿಯೂ ಖ್ಯಾತರಾಗಿದ್ದ ರಿಷಿ ಕಪೂರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು . ಉಸಿರಾಟದ ತೊಂದರೆಗೊಳಗಾಗಿದ್ದ ಅವರನ್ನು ಬುಧವಾರ ಬೆಳಗ್ಗೆ ಮುಂಬೈಯ | ಎಚ್ . ಎನ್ . ರಿಲಾಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ . ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಅಮೆರಿಕಕ್ಕೆ ತೆರಳಿ ಸುಮಾರು ಒಂದು ವರ್ಷ ಕಾಲ ಅಲ್ಲಿ ಚಿಕಿತ್ಸೆ ಪಡೆದು ಕಳೆದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಮರಳಿದ್ದರು . ರಾಜ್‌ಕಪೂರ್‌ ಹಾಗೂ ಕೃಷ್ಣ ರಾಜ್ ಕಪೂರ್ ದಂಪತಿಯ ಎರಡನೇ ಪುತ್ರನಾಗಿರುವ ರಿಷಿ 1973ರಲ್ಲಿ ಬಾಬ್ಬಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು , 1974ರಲ್ಲಿ ಈ ಚಿತ್ರಕ್ಕೆ ಫಿಲ್ಮಫೇರ್ ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದರು . ಬಾಬ್ಬಿ , ಅಮರ್ , ಅಕ್ಟ‌ , ಅಂಥೋನಿ ಹಾಗೂ ಚಾಂದಿನಿ ಚಿತ್ರದ ನಟನೆಯಿಂದ ಪ್ರಸಿದ್ದಿ ಪಡೆದಿದ್ದರು

ಈ ವರ್ಷದ ಫೆಬ್ರವರಿಯಲ್ಲಿ ಎರಡು ಬಾರಿ ರಿಷಿ ಆಸ್ಪತ್ರೆಗೆ ದಾಖಲಾಗಿದ್ದರು . ದಿಲ್ಲಿಯಲ್ಲಿ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಆಸ್ಪತ್ರೆಗೆ ಸೇರಿದ್ದರು . ಆ ನಂತರ ಮುಂಬೈನಲ್ಲಿ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದರು . ದಿಲ್ಲಿಯಲ್ಲಿ ಆಸ್ಪತ್ರೆಗೆ ದಾಖಲಾದ ಬಳಿಕ ಟೀಟ್ | ಮಾಡಿದ್ದ ರಿಷಿ ಕಪೂರ್ , ” ನನ್ನ ಪ್ರೀತಿಯ ಸ್ನೇಹಿತರೆ , ನನ್ನ ಆರೋಗ್ಯದ ಬಗ್ಗೆ ನಿಮ್ಮ ಕಾಳಜಿಯಿಂದ ಸಂತೋಷಗೊಂಡಿರುವೆ . ನಾನು ದಿಲ್ಲಿಯಲ್ಲಿ ಕಳೆದ 18 ದಿನಗಳಿಂದ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿದ್ದೆ . ದಿಲ್ಲಿಯ ಮಾಲಿನ್ಯದಿಂದಾಗಿ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ಸೇರಿದ್ದೇನೆ ‘ ಎಂದು ಬರೆದಿದ್ದರು . ರಿಷಿ ಕಪೂರ್‌ ಪತ್ನಿ ನೀತು ಕಪೂರ್ , ಪುತ್ರ ರಣಬೀರ್‌ ಹಾಗೂ ಪುತ್ರಿ ರಿಧಿಮಾರನ್ನು ಅಗಲಿದ್ದಾರೆ . ರಿಷಿ ಅವರ ದೀರ್ಘ ಕಾಲದ ಸ್ನೇಹಿತ , ‘ ಅಮರ್ ಅಕ್ಟರ್‌ ಅಂಥೋ ನಿ ‘ ಸಹಿತ ಹಲವು ಚಿತ್ರಗಳಲ್ಲಿ ಸಹ ನಟರಾಗಿದ್ದ ಅಮಿತಾಬ್ ಬಚ್ಚನ್ ಟೈಟ್ ಮೂಲಕ ಸ್ನೇಹಿತನ ಅಗಲಿಕೆಯ ಶೋಕ ವ್ಯಕ್ತಪಡಿಸಿದ್ದಾರೆ .

Please follow and like us:
error